ಕುಂಬಳೆ: ಸೂರಂಬೈಲು ಸರ್ಕಾರಿ ಪ್ರೌಢಶಾಲೆಯ ರಾಜ್ಯ ಮಟ್ಟದ ಪ್ರತಿಭೆಯನ್ನು ಶಾಲು ಹೊದೆಸಿ, ಸ್ಮರಣಿಕೆ, ಅಭಿನಂದನಾ ಪತ್ರ ನೀಡಿ ಸಮ್ಮಾನಿಸಲಾಯಿತು. ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಶ್ರೇಯ ಕೊಚ್ಚಿಯಲ್ಲಿ ನಡೆದ ರಾಜ್ಯ ಮಟ್ಟದ ಸೀನಿಯರ್ ಹುಡುಗಿಯರ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ ಕಾಸರಗೋಡು ಜಿಲ್ಲೆಯನ್ನು ಪ್ರತಿನಿಧಿಸಿ ಭಾಗವಹಿಸಿದ್ದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಬು ಪಿ, ಮುಖ್ಯೋಪಾಧ್ಯಾಯಿನಿ ಸುನೀತ ಎ, ಮಾತೃ ಸಂಘದ ಅಧ್ಯಕ್ಷೆ ಆಸಿಯತ್ ಅಸೀದ, ಸದಸ್ಯೆ ಭವಾನಿ ಉಪಸ್ಥಿತರಿದ್ದರು. ಜೀವನ್ ಕುಮಾರ್ ಸ್ವಾಗತಿಸಿ, ಅಂಜಲಿ ಎಲ್. ಜೆ. ವಂದಿಸಿದರು.




