ಕುಂಬಳೆ : ಪೆರ್ಣೆ ಶ್ರೀ ಪಡ್ಡಯಿ ಧೂಮಾವತಿ ಹಾಗೂ ಪರಿವಾರ ದೈವಗಳ ನೇಮೋತ್ಸವ ನಾಳೆಯಿಂದ ಬುಧವಾರದ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಫೆಬ್ರವರಿ 11ರಂದು(ನಾಳೆ) ಸಂಜೆ 6 45 ಕ್ಕೆ ಅನಂತಪುರ ತರವಾಡು ದೊಡ್ಡ ಮನೆಯಿಂದ ಶ್ರೀ ದೈವಗಳ ಭಂಡಾರ ಶ್ರೀ ಶ್ರೀಕೃಷ್ಣಯ್ಯ ಅನಂತಪುರ ಇವರ ನೇತೃತ್ವದಲ್ಲಿ ವಾದ್ಯ ಘೋಷಗಳೊಂದಿಗೆ ಪೆರ್ಣೆ ಕಳ ಶ್ರೀ ದೈವದ ಗದ್ದೆಗೆ ಹೊರಡುವುದು. ರಾತ್ರಿ 8 ಕ್ಕೆ ತೊಡಂಙಲ್, ಮೋಂದಿ ಕೋಲ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ.
ಫೆಬ್ರುವರಿ 12ರಂದು ಬೆಳಗ್ಗೆ 8 ಕ್ಕೆ ಶ್ರೀ ಬಬ್ಬರ್ಯ ದೈವದ ಕೋಲ, ಬೆಳಗ್ಗೆ 10ಕ್ಕೆ ಶ್ರೀ ಸ್ಥಳ ಧೂಮಾವತಿ ದೈವದ ಕೋಲ ಮತ್ತು ಮಧ್ಯಾಹ್ನ 12: ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ 1:30ಕ್ಕೆ ಶ್ರೀ ಪಡ್ಡಯಿ ಧೂಮಾವತಿ (ಶ್ರೀ ಪಡಿಂಞರ್ ಚಾಮುಂಡಿ ) ದೈವದ ಕೋಲ ಮತ್ತು ಪ್ರಸಾದ ವಿತರಣೆ ನಡೆಯಲಿದೆ.
ಅಪರಾಹ್ನ 4 ಕ್ಕೆ ಶ್ರೀ ಗುಳಿಗ ದೈವದ ಕೋಲ ಮತ್ತು ಭಂಡಾರ ನಿರ್ಗಮನದೊಂದಿಗೆ ನೇಮೋತ್ಸವ ಸಂಪನ್ನಗೊಳ್ಳಲಿದೆ.






