ಮಧೂರು : ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ದೇವಸ್ಥಾನದಲ್ಲಿ ಫೆ. 16 ರಂದು ಪ್ರತಿಷ್ಠಾ ದಿನಾಚರಣೆ ನಡೆಯಲಿದ್ದು ಸಿದ್ಧತೆಗಳು ಪ್ರಗತಿಯಲ್ಲಿದೆ. ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರು ವಿಧಿವಿಧಾನಗಳ ನೇತೃತ್ವ ವಹಿಸುವರು. ಬೆಳಿಗ್ಗೆ ಗಣಪತಿ ಹೋಮ, ರುದ್ರಾಭಿಷೇಕ, ಉಷಃಪೂಜೆ, ನವಕಾಭಿಷೇಕ, ಸಂಜೆ 5.30 ರಿಂದ ಸಾಮೂಹಿಕ. ಸತ್ಯನಾರಾಯಣ ಪೂಜೆ, ರಾತ್ರಿ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ.





