HEALTH TIPS

ದೇಶಮಂಗಲ ಶಂಕರನಾರಾಯಣ ಕುಟ್ಟಿಚಾತ ದೇವಸ್ಥಾನ: ಜೀಣೋದ್ಧಾರ ರೂಪೀಕರಣ ಸಭೆ

ಮಧೂರು: ಇತಿಹಾಸ ಪ್ರಸಿದ್ಧ ಉಳಿಯ ಮನೆತನದ ನಾಲ್ಕು ದೇವಸ್ಥಾನಗಳಲ್ಲಿ ಒಂದಾದ ದೇಶಮಂಗಲ ಶ್ರೀ ಶಂಕರನಾರಾಯಣ ಕುಟ್ಟಿಚಾತ ದೇವಸ್ಥಾನ 2004 ರಲ್ಲಿ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ  ಅವರ ದಿವ್ಯ ಹಸ್ತದಿಂದ ಬ್ರಹ್ಮಕಲಶಗೊಂಡು ಸುಮಾರು 21 ವರ್ಷಗಳು ಕಳೆದು, 2022 ಇಸವಿಯಲ್ಲಿ ಅಷ್ಟಮಂಗಲ ಪ್ರಶ್ನ ಚಿಂತನೆ ನಡೆಸಿ ಕ್ಷೇತ್ರದ ಮೂಲ ದೇವರಾದ ಶಂಕರನಾರಾಯಣರಿಗೆ ಉತ್ಸವಾದಿಗಳು ನಡೆಯುವುದಿಲ್ಲ ಎಂದು ಕಂಡುಬಂದು, ಕ್ಷೇತ್ರದ ತಂತ್ರಿಗಳಾದ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ  ಪರಿಹಾರ ಕಾರ್ಯಗಳು ನಡೆದು ನಂತರ ಊರಿನ ಸಮಸ್ತ ಭಕ್ತ ಮಹಾಶಯರನ್ನು ಒಂದುಗೂಡಿಸಿ ಜೀರ್ಣೋದ್ಧಾರ ಕಾರ್ಯಗಳಿಗೆ ತೊಡಗಿಸಿಕೊಳ್ಳಲು ಕ್ಷೇತ್ರದ ಪರಿಸರದಲ್ಲಿ ಭಕ್ತ ಮಹಾಶಯರ ಸಭೆಯನ್ನು ಕರೆದು ಹೊಸ ಸಮಿತಿಯನ್ನು ರೂಪಿಕರಿಸಲಾಯಿತು.


ಸಭೆಯಲ್ಲಿ ಕ್ಷೇತ್ರ ತಂತ್ರಿಗಳಾದ ಉಳಿಯತ್ತಾಯ ವಿಷ್ಣು ಅಸ್ರ, ರವೀಂದ್ರ ಆಳ್ವ ಕೋಟೆಕುಂಜ, ಕೆ.ಎನ್.ವೆಂಕಟ್ರಮಣ ಹೊಳ್ಳ, ನಾರಾಯಣ ಪೂಜಾರಿ ಪುತ್ತೂರು ಕೊಟ್ಯ, ಸೀನ ಶೆಟ್ಟಿ ಕಜೆ, ವಕೀಲ. ಲಕ್ಷ್ಮಣ್ ನೋಂಡ ಕೋಟೆಕುಂಜ, ಬಾಲಕೃಷ್ಣ ನಾಯರ್, ರಾಮಕೃಷ್ಣ ಸಂತಡ್ಕ, ಮೋಹನ್ ಕುಮಾರ್ ರೈ ಅಡ್ಕ ಮೊದಲಾದವರು ಜೀರ್ಣೋದ್ಧಾರದ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡಿದರು. ಸಮಿತಿಯ ಗೌರವಾಧ್ಯಕ್ಷ ಕ್ಷೇತ್ರದ ತಂತ್ರಿಗಳಾದ ಉಳಿಯತ್ತಾಯ ವಿಷ್ಣು ಆಸ್ರ, ಅಧ್ಯಕ್ಷರಾಗಿ ಲಕ್ಷ್ಮೀನಾರಾಯಣ ಕಾವು ಪಟ್ಟೇರಿ ಕಾವು ಮಠ ಚೌಕಿ, ಕಾರ್ಯಾಧ್ಯಕ್ಷರುಗಳಾಗಿ ರವೀಂದ್ರ ಆಳ್ವ ಕಂಬಾರ್ ಕೋಟೆಗುಂಜ, ಜಯರಾಮ ರೈ ಸಿರಿಬಾಗಿಲು (ತ್ರಿನೇತ್ರ) ಹಾಗೂ ಗಣೇಶ ಭಂಡಾರಿ ಮಾಯಿಪ್ಪಾಡಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ ಆಚಾರ್ ಕಂಬಾರ್, ಕೋಶಾಧಿಕಾರಿಯಾಗಿ ಸುಬ್ರಮಣ್ಯ ಕಾರಂತ್ ದೇಶಮಂಗಲ, 18 ಮಂದಿ ಉಪಾಧ್ಯಕ್ಷರು, 14 ಮಂದಿ ಕಾರ್ಯದರ್ಶಿಗಳು ಹಾಗೂ ಇಬ್ಬರು ಲೆಕ್ಕಪರಿಶೋದಕರಾಗಿ ಆಯ್ಕೆ ಮಾಡಲಾಯಿತು. ಗಾಯತ್ರಿ ಕಾರಂತ ಹಾಗೂ ಶರಣ್ಯ ಮಾಲತಿ ಕಾರಂತ ಪ್ರಾರ್ಥನೆ ಹಾಡಿದರು ದೇಶಮಂಗಲ ಪ್ರಭಾಕರ ಕಾರಂತ ಸ್ವಾಗತಿಸಿ, ಪ್ರಸನ್ನ ಕೃಷ್ಣ ಕಾರಂತ ನಿರೂಪಿಸಿ ವಂದಿಸಿದರು. ಬಳಿಕ ಶಂಕರನಾರಾಯಣ ಹಾಗೂ ಕುಟ್ಟಿಚಾತ ದೇವರುಗಳಿಗೆ ಮಹಾಪೂಜೆ ನಡೆಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries