ಬದಿಯಡ್ಕ: ಮಿಂಚಿಪದವು ಶ್ರೀ ಕಾವೇರಮ್ಮ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಜೀರ್ಣೋದ್ಧಾರ ಬ್ರಹ್ಮಕಲಶ ನಿಧಿ ಸಂಗ್ರಹಣಾರ್ಥ ಲಕ್ಕಿ ಕೂಪನ್ ಬಿಡುಗಡೆಯು ಕ್ಷೇತ್ರದ ಸಭಾಂಗಣದಲ್ಲಿ ಭಾನುವಾರ ಜರಗಿತು. ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ನ್ಯಾಯವಾದಿ ದಾಮೋದರ ಮಣಿಯಾಣಿ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಕ್ಷೇತ್ರದ ತಂತ್ತ್ರಿವರ್ಯ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯ ಅಧಿಕಾರಿ ಸಂತೋಷ್ ರೈ ಸಬ್ರುಕಜೆ ಲಕ್ಕಿ ಕೂಪನ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಬ್ರಹ್ಮಕಲಶ ಸಮಿತಿಯ ಗೌರವಾಧ್ಯಕ್ಷ ವಸಂತ ಪೈ ಬದಿಯಡ್ಕ, ಧಾರ್ಮಿಕ ಮುಖಂಡರಾದ ಎಂ.ಸಂಜೀವ ಶೆಟ್ಟಿ ಮೊಟ್ಟೆಕುಂಜ, ಮುಳಿಯಾರು ಕ್ಷೇತ್ರ ಮೊಕ್ತೇಸರ ಸೀತಾರಾಮ ಬಳ್ಳುಳ್ಳಾಯ, ದಾಮೋದರ ಕುಳ, ಮನಮೋಹನ ರೈ ಪಿಂಡಗ, ಪಿ.ಕೆ ಶೆಟ್ಟಿ, ಅಶೋಕ್ ನಾಯಕ್ ಪಾಂಡಿ, ಸುಭಾಷ್ ಚಂದ್ರ ರೈ ಕರ್ನೂರು, ರಾಘವ ಎಂ ಎನ್, ರಾಮಚಂದ್ರ ಎನ್, ಚಂದ್ರಶೇಖರ ಎಂ ಎನ್, ಸೇವಾ ಸಮಿತಿಯ ಅಧ್ಯಕ್ಷ ಸದಾನಂದ ಅಡ್ಕ ಮುಂತಾದವರು ಶುಭಾಶಂಸನೆಗೈದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಜಯಕರ ಎಂ. ಸ್ವಾಗತಿಸಿ, ಕೋಶಾಧಿಕಾರಿ ನಾರಾಯಣ ಕೇಕಡ್ಕ ವಂದಿಸಿದರು. ಇದೇ ಸಂದರ್ಭದಲ್ಲಿ ಕಾವೇರಿ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್ ಮಿಂಚಿಪದವು ಇವರಿಗೆ ಜೀರ್ಣೋದ್ಧಾರದ 500 ಲಕ್ಕಿ ಕೂಪನ್ ಪುಸ್ತಕಗಳನ್ನು ಪ್ರಥಮವಾಗಿ ಹಸ್ತಾಂತರಿಸಲಾಯಿತು. ವೈಷ್ಣವಿ, ಶರಣ್ಯ ಪ್ರಾರ್ಥನೆ ಹಾಡಿದರು.




.jpg)
