ಕಾಸರಗೋಡು: ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ವೆಳ್ಳಚ್ಚಾಲಿನ ಬಾಲಕರ ಮಾದರಿ ರೆಸಿಡೆನ್ಶಿಯಲ್ ಶಾಲೆಯ ವಿದ್ಯಾರ್ಥಿಗಳ ರಾತ್ರಿ ಅಧ್ಯಯನಕ್ಕಾಗಿ ಮೇಟ್ರನ್ ಕಮ್ ರೆಸಿಡೆಂಟ್ ಟ್ಯೂಟರನ್ನು ನೇಮಕ ಮಾಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅರ್ಜಿದಾರರ ಅಭಾವವಿದ್ದಲ್ಲಿ, ಇತರ ವಿಭಾಗದವರನ್ನು ಪರಿಗಣಿಸಲಾಗುವುದು. ಪದವಿ ಮತ್ತು ಬಿ.ಎಡ್ ಪದವಿ ಇರುವವರಿಗೆ ಅವಕಾಶ. ಫೆಬ್ರವರಿ 5 ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿಯಲ್ಲಿ ಸಂದರ್ಶನ ನಡೆಸಲಾಗುವುದು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 256162)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




