ಬದಿಯಡ್ಕ: ಯುವ ತಲೆಮಾರಿನಲ್ಲಿ ಪುಸ್ತಕಗಳನ್ನು ಓದುವ ಮನೋಭೂಮಿಕೆಯನ್ನು ಸೃಷ್ಟಿಮಾಡಿಕೊಡುವ ಸಾಧ್ಯತೆಗಳ ಬಗ್ಗೆ ಕ್ರಿಯಾಶೀಲ ನೆಲೆಯಲ್ಲಿ ಯೋಚಿಸಬೇಕಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ತಿಳಿಸಿದ್ದಾರೆ. ಅವರು ಮನೆಗೊಂದು ಗ್ರಂಥಾಲಯ ಯೋಜನೆಯ ಕಾಸರಗೋಡು ವಲಯದ ಉದ್ಘಾಟನೆಯನ್ನು ಪ್ರಾಧ್ಯಾಪಕ ಪೆÇ್ರ. ರತ್ನಾಕರ ಮಲ್ಲಮೂಲೆ ಅವರ ನಿವಾಸ 'ಬನವಾಸಿ'ಯಲ್ಲಿ ನೆರವೇರಿಸಿ ಮಾತನಾಡಿದರು.
ಇತ್ತೀಚೆಗೆ ಪುಸ್ತಕದ ಓದಿನ ಮಹತ್ವ ಗಣನೀಯವಾಗಿ ಕುಸಿದಿದೆ. ಈ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ಮಹತ್ವದ ಯೋಜನೆಯನ್ನು ರೂಪಿಸಿದ್ದು, ಮನೆಗೊಂದು ಗ್ರಂಥಾಲಯ ಎಂಬ ಹೆಸರಿನ ಯೋಜನೆ ಸಾಕಾರಗೋಳ್ಳುತ್ತಿದೆ. ಅನ್ಯಾಯವಾಗಿ ಕೇರಳಕ್ಕೆ ಸೇರ್ಪಡೆಗೊಂಡಿರುವ ಕಾಸರಗೋಡಿನಲ್ಲಿ ಕನ್ನಡ ಇಂದಿಗೂ ಜೀವಂತವಾಗಿ ಉಳಿದಿದೆ ಎಂಬುದಕ್ಕೆ ಇಲ್ಲಿನ ಕನ್ನಡ ಮಾಧ್ಯಮ ಶಾಲೆಗಳು ಹಾಗೂ ಕನ್ನಡಪರ ಚಟುವಟಿಕೆಗಳು ಜ್ವಲಂತ ನಿದರ್ಶನವಾಗಿದೆ. ಸ್ವ ಇಚ್ಛೆಯಿಂದ ಮನೆಯಲ್ಲೊಂದು ಗ್ರಂಥಾಲಯ ರಚಿಸಿ ಇದನ್ನು ವಿದ್ಯಾರ್ಥಿಗಳಿಗೆ ಸದುಪಯೋಗ ಪಡಿಸುವ ಬನವಾಸಿಯ ಪರಿಕಲ್ಪನೆಗೆ ಪುಸ್ತಕ ಪ್ರಾಧಿಕಾರವು ಸದಾ ಪೆÇ್ರೀತ್ಸಾಹ ನೀಡಲಿದೆ ಎಂದು ತಿಳಿಸಿದರು.
ಗಡಿನಾಡ ಸಾಹಿತ್ಯಕ ಸಾಂಸ್ಕøತಿಕ ಅಕಾಡೆಮಿ ಕಾಸರಗೋಡು ಸಹಕಾರದೊಂದಿಗೆ ಕಾರ್ಯಕ್ರಮ ಯೋಜಿಸಲಾಗಿತ್ತು. ಡಾ. ಮಾನಸ ಅವರು ಪೆÇ್ರ. ರತ್ನಾಕರ ಮಲ್ಲಮೂಲೆ ದಂಪತಿಗೆ ಪುಸ್ತಕ ಪ್ರಾಧಿಕಾರವು ನೀಡುವ ಪುಸ್ತಕಗಳನ್ನು ಹಸ್ತಾಂತರಿಸಿದರು. ಗಡಿನಾಡ ಸಾಹಿತ್ಯಕ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಈ ಸಂಸ್ಥೆಯ ಅಧ್ಯಕ್ಷ ಚನಿಯಪ್ಪ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ ಆರ್ ಸುಬ್ಬಯ್ಯಕಟ್ಟೆ, ಗಡಿನಾಡ ಅಕಾಡೆಮಿ ಕಾರ್ಯದರ್ಶಿ ಅಖಿಲೇಶ್ ನಗುಮುಗಂ, ಪೆÇ್ರ. ಎ ಶ್ರೀನಾಥ್, ಶಿವಶಂಕರ ನೆಕ್ರಾಜೆ, ಬಾಲಕೃಷ್ಣ ನೀರ್ಚಾಲು, ರಾಜೀವಿ ಟೀಚರ್, ಸುನಿತಾ ಯಾದವ್, ವರ್ಷಾ ಮಲ್ಲಮೂಲೆ ಮೊದಲಾದವರು ಉಪಸ್ಥಿತರಿದ್ದರು. ಪತ್ರಕರ್ತ ರವಿ ನಾಯ್ಕಾಪು ಸ್ವಾಗತಿಸಿದರು. ಪೆÇ್ರ. ರತ್ನಾಕರ ಮಲ್ಲಮೂಲೆ ವಂದಿಸಿದರು.





