ಕುಂಬಳೆ : ಅಮೆತ್ತೋಡು ಶ್ರೀ ಧೂಮಾವತೀ ದೈವಸ್ಥಾನದ ಪ್ರತಿಷ್ಠಾ ದಿನಾಚರಣೆ, ಶ್ರೀ ಧೂಮಾವತೀ ದೈವದ ಧರ್ಮನೇಮ ಮತ್ತು ಪರಿವಾರ ದೈವಗಳ ತಂಬಿಲ ಸೇವೆ ಫೆ. 9ಹಾಗೂ 10ರಂದು ಜರುಗಲಿದೆ.
9ರಂದು ಬೆಳಗ್ಗೆ 7.30ಕ್ಕೆ ಗಣಪತಿ ಹವನ, ಪ್ರತಿಷ್ಠಾ ದಿನ ತಂಬಿಲ, ನಾಗತಂಬಿಲ, ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12ಕ್ಕೆ ಹರಿಸೇವೆ,ಸಂಜೆ 6ಕ್ಕೆ ಭಜನೆ, ರಾತ್ರಿ 8ಕ್ಕೆ ಕಲ್ಲಾಲ್ತ ಗುಳಿಗ ನ ಕೋಲ ನಡೆಯುವುದು. 10ರಂದು ಬೆಳಗ್ಗೆ 10ಕ್ಕೆ ಶ್ರೀ ಧೂಮಾವತೀ ದೈವದ ಧರ್ಮನೇಮ, ಸಂಜೆ 5ಕ್ಕೆ ಕೊರತಿ ದೈವದ ಕೋಲ, ರಾತ್ರಿ 9ರಿಂದ ಉಪದೈವಗಳ ತಂಬಿಲ ಸೇವೆ ನಡೆಯುವುದು.

