ಮಂಜೇಶ್ವರ: ಬಜಪೆ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ ವತಿಯಿಂದ ಸೇವಾ ರೂಪದಲ್ಲಿ "ಶ್ರೀದೇವಿ ಮಹಾತ್ಮೆ"ಯಕ್ಷಗಾನ ಬಯಲಾಟ ಫೆ. 10ರಂದು ಮುಡಿಮಾರು ಬಾಕಿ ಮಾರು ಗದ್ದೆಯಲ್ಲಿ ಜರುಗಲಿದೆ. ಬೇಬಿ ಮತ್ತು ಚಂದ್ರಹಾಸ ಪೂಜಾರಿ ಮತ್ತು ಮಕ್ಕಳು ಸೇವಾರೂಪದಲ್ಲಿ ಯಕ್ಷಗಾನ ನಡೆಸಿಕೊಡಲಿದ್ದಾರೆ.
ಅಂದು ಮಧ್ಯಾಹ್ನ ಅನ್ನಪೂರ್ಣ ನಿಲಯದಲ್ಲಿ ದೇವಿಗೆ ವಿಶೇಷ ಪೂಜೆ, ಬೆಳ್ಳಿ ಹಬ್ಬದ ಸಂಭ್ರಮದ ಸಂದರ್ಭದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿರುವುದು. ಕಣಿಯೂರು ಸ್ರೀ ಚಾಮುಂಡೇಶ್ವರೀ ಕ್ಷೇತ್ರದ ಪರಮಪೂಜ್ಯ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ವಿಶ್ವ ಹಿಂದೂ ಪರಿಷತ್ ಮಂಜೇಶ್ವರ ಮಂಡಲದ ಅಧ್ಯಕ್ಷರಾದ ಶ್ರೀಕೃಷ್ಣ ಶಿವ ಕೃಪಾ ಅದ್ಯಕ್ಷತೆ ವಹಿಸುವರು. ಸುಂಕದಕಟ್ಟೆ ಬಜಪೆ ಇದರ ಅನುವಂಶಿಕ ಮೊಕ್ತೇಸರ ನಾರಾಯಣ ಎನ್ ಪೂಜಾರಿ ಗೌರವ ಉಪಸ್ಥಿತಿ ವಹಿಸುವರು. ಉದ್ಯಾವರ ಅಣ್ಣ ದೈವ ಪಾತ್ರಿ ರಾಜ ಬೆಳ್ಚಪ್ಪಾಡ, ಮೋಹನದಸ ಭಂಡಾರಿ ಮೊದಲಾದವರುಅತಿಥಿಯಾಗಿ ಭಾಗವಹಿಸುವರು.

