ಗಡ್‌ಚಿರೋಲಿ: ಮಹಾರಾಷ್ಟ್ರದ ಗಢಚಿರೋಲಿ ಜಿಲ್ಲೆಯಲ್ಲಿ ಮಂಗಳವಾರ ನಕ್ಸಲರ ಜತೆ ನಡೆದ ಗುಂಡಿನ ಚಕಮಕಿಯಲ್ಲಿ ಸಿ- 60 ಕಮಾಂಡೊ ಘಟಕದ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ.
ಡೈರಂಗಿ ಮತ್ತು ಫುಲ್ನರ್ ಗ್ರಾಮಗಳ ನಡುವೆ ನಕ್ಸಲರು ಶಿಬಿರ ಹೂಡಿರುವ ಬಗ್ಗೆ ಲಭಿಸಿದ ಗುಪ್ತಚರ ಮಾಹಿತಿ ಆಧರಿಸಿ ಸೋಮವಾರ 18 ಸಿ -60 ಘಟಕಗಳು ಮತ್ತು ಸಿಆರ್‌ಪಿಎಫ್‌ನ 2 ಕ್ಯುಎಟಿ ಘಟಕಗಳು ಕಾರ್ಯಾಚರಣೆ ನಡೆಸಿದವು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.






