HEALTH TIPS

ವಿವಿಧ ದೇವಾಲಯಗಳ ಪಾರಂಪರಿಕ ಟ್ರಸ್ಟಿಗಳ ನೇಮಕಕ್ಕೆ ಅರ್ಜಿ ಆಹ್ವಾನ

ಕಾಸರಗೋಡು: ಮಲಬಾರು ದೇವಸ್ವಂ ಮಂಡಳಿ ಅಧೀನದಲ್ಲಿರುವ ಕಾಸರಗೋಡು ಜಿಲ್ಲೆಯ ವಿವಿಧ ದೇವ್ಥಾನಗಳಿಗೆ ಪಾರಂಪರಿಕ ಟ್ರಸ್ಟಿಗಳ ನೇಮಕಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.  ಮಂಜೇಶ್ವರ ತಾಲೂಕಿನ ಮುಗು ಗ್ರಾಮದ ಮುಗು ಶ್ರೀ ಸುಬ್ರಾಯ ದೇವಸ್ಥಾನದಲ್ಲಿ 5 ಖಾಲಿ ಸಾಂಪ್ರಾದಾಯಿಕ ಟ್ರಸ್ಟಿಗಳ ಹುದ್ದೆಗಳಿಗೆ ದೇವಸ್ಥಾನದ ಸನಿಹ ವಾಸವಾಗಿರುವ ಹಿಂದೂ ಧರ್ಮೀಯರಿಂದ ಅರ್ಜಿ ಆಹ್ವಾನಿಸಲಾಗಿದೆ. 

ಮಲಬಾರು ದೇವಸ್ವಂ ಮಂಡಳಿ ಅದಿನದಲ್ಲಿರುವ ಕಾಸರಗೋಡು ಜಿಲ್ಲೆ, ಹೊಸದುರ್ಗ ತಾಲೂಕಿನ ಕಯ್ಯೂರು ಗ್ರಾಮದ ಆಲಂತಟ್ಟ ಶ್ರೀ ಮಹಾ ವಿಷ್ಣು ಕ್ಷೇತ್ರದಲ್ಲಿ ತೆರವಾಗಿರುವ 5 ಸಾಂಪ್ರಾದಾಯಿಕ ಟ್ರಸ್ಟಿಗಳ ಹುದ್ದೆಗಳ ನೇಮಕಕ್ಕಾಗಿ ದೇವಸ್ಥಾನದ ಸಮೀಪ ವಾಸವಾಗಿರುವ ಹಿಂದೂ ಧರ್ಮೀಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅಲ್ಲದೆ ಮಲಬಾರು ದೇವಸ್ವಂ ಮಂಡಳಿ ಅದಿನದಲ್ಲಿರುವ ಕಾಸರಗೋಡು ಜಿಲ್ಲೆ, ಹೊಸದುರ್ಗ ತಾಲೂಕಿನ ನೀಲೇಶ್ವರ ಗ್ರಾಮದ ಪಳ್ಳಿಕ್ಕರ ಶ್ರೀ ಭಗವತಿ ಕ್ಷೇತ್ರದಲ್ಲಿ ತೆರವಾಗಿರುವ 3 ಸಾಂಪ್ರಾದಾಯಿಕ ಟ್ರಸ್ಟಿಗಳ ಹುದ್ದೆಗಳಿಗೆ ದೇವಸ್ಥಾನದ ಸಮೀಪ ವಾಸವಾಗಿರುವ ಹಿಂದೂ ಧರ್ಮೀಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಫಾರ್ಮ್  ಮಲಬಾರು ದೇವಸ್ವಂ ಮಂಡಳಿ ವೆಬ್‍ಸೈಟ್, ಸಹಾಯಕ ಆಯುಕ್ತರ ಕಚೇರಿ, ನೀಲೇಶ್ವರದಿಂದ ಲಭಿಸುವುದು. ಭರ್ತಿ ಮಾಡಿದ ಅರ್ಜಿಗಳನ್ನು  ಫೆ. 15ರಂದು ಸಂಜೆ 5 ಗಂಟೆಯೊಳಗೆ ಮಲಬಾರು ದೇವಸ್ವಂ ಮಂಡಳಿ, ಕಾಸರಗೋಡು ವಿಭಾಗ ನೀಲೇಶ್ವರದ ಸಹಾಯಕ ಆಯುಕ್ತರ ಕಛೇರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries