HEALTH TIPS

ಕೃಷಿಕರ ಆದಾಯ ಹೆಚ್ಚಿಸುವ ಕೇರಳ ಗ್ರೋ ಔಟ್ ಲೆಟ್ ಲೋಕಾರ್ಪಣೆ

ಮಂಜೇಶ್ವರ : 2020 ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಎಫ್.ಪಿ.ಒ ನ ಅಧೀನದಲ್ಲಿರುವ ಕೇರಳ ಕೃಷಿ ಇಲಾಖೆಯ ನೇತೃದಲ್ಲಿ ಕೃಷಿಕರಿಗೆ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಮಂಜೇಶ್ವರ ಬ್ಲಾಕ್ ಪಂಚಾಯತಿ ವ್ಯಾಪ್ತಿಯಲ್ಲಿರುವ ಏಳು ಪಂಚಾಯತುಗಳಿಂದ 750 ಕೃಷಿಕರನ್ನು ಸದಸ್ಯರನ್ನಾಗಿಸಿ ಗ್ರಾಹಕರಿಗೆ ಶುದ್ಧ ಮತ್ತು ಪೂರಕ ಆಹಾರ ಉತ್ಪನ್ನಗಳನ್ನು ನೀಡುವ ಉದ್ದೇಶದೊಂದಿಗೆ ಎಲ್ಲಾ ರೀತಿಯ ರೋಗಗಳಿಗೂ ರಾಮಬಾಣವಾಗಿರುವ ನಾರುಗಳು, ಪ್ರೊಟೀನ್, ಕ್ಯಾಲ್ಸಿಯಂ ಫಾಸ್ಪರಸ್, ಕಬ್ಬಿಣದ ಅಂಶ, ದಾತುಗಳು ಸೇರಿದಂತೆ ಸಿರಿ ಧಾನ್ಯಗಳ ಉತ್ಪನ್ನಗಳನ್ನೊಳಗೊಂಡ ಕೃಷಿ ಅಭಿವೃದ್ಧಿ ಕೃಷಿಕ್ಷೇಮ ಇಲಾಖೆ ಮಂಜೇಶ್ವರ ಫೆಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿಗೆ ಅನುಮತಿಸಲಾದ ಕೇರಳ ಗ್ರೋ ಸೂಪರ್ ಮಾರ್ಕೆಟ್ ಮಂಜೇಶ್ವರದ ರಾಗಂ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಬದಿಯಲ್ಲಿ ಶನಿವಾರ ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಲೋಕಾರ್ಪಣೆಗೊಳಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಉಪಾಧ್ಯಕ್ಷ ಹನೀಫ್ ಪಿ ಕೆ ಅಧ್ಯಕ್ಷತೆ ವಹಿಸಿದ್ದರು.


ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವುದು, ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವುದು ಮತ್ತು ಈ ಲಾಭದ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಈ ಉಪಕ್ರಮದ ಮುಖ್ಯ ಉದ್ದೇಶವಾಗಿದೆ. ಕೇಂದ್ರ ಸರ್ಕಾರವು ಕೃಷಿ ಉತ್ಪಾದಕ ಕಂಪನಿಗಳನ್ನು ಪ್ರಾರಂಭಿಸುವ ನೀತಿಯನ್ನು ಅಳವಡಿಸಿಕೊಂಡಿರುವ ಜೊತೆಗೆ ಈ ಉದ್ದೇಶವನ್ನು ಸಾಧಿಸುವ ಉದ್ದೇಶದಿಂದ ರಾಜ್ಯ ಸರ್ಕಾರಗಳು ಅವುಗಳನ್ನು ಪ್ರೋತ್ಸಾಹಿಸುತ್ತಿವೆ. ವಿಷಮುಕ್ತ ಕೃಷಿಗೆ ಉತ್ತೇಜನ ನೀಡುವ ಮೂಲಕ ಕಳೆದು ಹೋಗಿರುವ ನಮ್ಮ ಕೃಷಿ ಸಂಸ್ಕøತಿ ಮತ್ತು ಸಮೃದ್ಧಿಯನ್ನು ಮರಳಿ ತರುವ ಉದ್ದೇಶದಿಂದ ಕೇರಳ ಗ್ರೋ ಔಟ್ ಲೆಟ್ ಕಾರ್ಯಾಚರಿಸಲಿದೆ.

ಈ ಉದ್ದೇಶಕ್ಕಾಗಿ, ಈ ಕಂಪನಿಯ ಮೊದಲ ಉಪಕ್ರಮವಾಗಿ, ಸ್ಥಳೀಯವಾಗಿ ಲಭ್ಯವಿರುವ ಸಂಪೂರ್ಣ ಸಾವಯವ ಹಲಸಿನ ಹಣ್ಣಿನಿಂದ ತಯಾರಿಸಿದ ವಿವಿಧ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಮೊದಲ ಉತ್ಪಾದನಾ ಘಟಕವನ್ನು ಮಂಜೇಶ್ವರ ಮಂಡಲದಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಈ ಕಂಪನಿಯು ಯಾವುದೇ ರೀತಿಯ ಹಲಸಿನ ಹಣ್ಣನ್ನು ರೈತರಿಂದ ತನ್ನ ಕಚ್ಚಾ ವಸ್ತುವಾಗಿ ಉತ್ತಮ ಬೆಲೆಗೆ ಈ ಕಂಪನಿ ಖರೀದಸಲಿದೆ.

ಸಾಮಗ್ರಿಗಳ ಮೊದಲ ಮಾರಾಟವನ್ನು ಶಾಸಕರು ದಯಾನಂದ ಬಂಗೇರ ರವರಿಗೆ ನೀಡಿ ಮೊದಲ ಮಾರಾಟ ನಡೆಸಿದರು.

ಮಂಜೇಶ್ವರ ಬ್ಲಾಕ್ ನ 7 ಪಂಚಾಯತಿಗಳಿಗೆ ಒಳಪಟ್ಟ, ಕನಿಷ್ಠ ಒಂದು ಹಲಸಿನ ಮರ ಹೊಂದಿರುವ ರೈತರು ಈ ಸಂಘಕ್ಕೆ ಸೇರಬಹುದಾಗಿದೆ.

ಕೇರಳ ಗ್ರೋ ಸೂಪರ್ ಮಾರ್ಕೆಟ್ ತನ್ನ ವ್ಯಾಪಾರದಲ್ಲಿ ಗ್ರಾಹಕರ ಆರೋಗ್ಯವನ್ನು ಮುಖ್ಯವಾಗಿ ಪರಿಗಣಿಸಿದ್ದು, ನೈಸರ್ಗಿಕವಾಗಿ ಬೆಳೆಯುವ ಸಿರಿ ಧಾನ್ಯಗಳನ್ನು ಬಳಸಿಕೊಂಡು ವಿವಿಧ ಆಹಾರ ಉತ್ಪನ್ನಗಳನ್ನು ರುಚಿಕರವಾಗಿ ಮತ್ತು ಆರೋಗ್ಯಕರವಾಗಿ ತಲುಪಿಸಲು ಪ್ರಯತ್ನಿಸಲಿರುವುದಾಗಿ ಸಂಬಂಧಪಟ್ಟವರು ಮಾಹಿತಿ ನೀಡಿದ್ದಾರೆ.

ವೇದಿಕೆಯಲ್ಲಿ ಕಂಪನಿ ಸಲಹೆಗಾರರಾಗಿರುವ ಅನಿಲ್ ಕುಮಾರ್ ರಿಗೆ ಶಾಲು ಹಾಕಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಟಿ ರಾಮ ಚಂದ್ರ ವರದಿ ವಾಚಿಸಿದರು.

ಈ ಸಂದರ್ಭ ಸೈನ್ ನಿರ್ದೇಶಕ ಫಾರೂಕ್ ಅಬ್ದುಲ್ ರಹ್ಮಾನ್, ಯೋಜನಾ ನಿರ್ದೇಶಕ ಆನಂದ ಕೆ, ಮೀಂಜ ಗ್ರಾಮ ಪಂಚಾಯತಿ  ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ, ಜನಪ್ರತಿನಿಧಿಗಳಾದ ಹಮೀದ್, ಅಬೂಬಕ್ಕರ್ ಸಿದ್ದೀಖ್, ಸಹ ಯೋಜನಾ ನಿರ್ದೇಶಕಿ ಸುಮಾ ಡಿ ಎನ್, ಕೃಪಿ ಸಹಾಯಕ ನಿರ್ದೇಶಕಿ ಅರ್ಜಿತ, ಶ್ರೀ ಹರಿ, ರಾಜೇಶ್, ಆರೋಗ್ಯಾಧಿಕಾರಿ ದಿಲೀಪ್ ಸಹಿತ ಹಲವರು ಪಾಲ್ಗೊಂಡಿದ್ದರು. ಸುಜಿತಾ ಸ್ವಾಗತಿಸಿ, ಅಶ್ರಫ್ ಕುಂಜತ್ತೂರು ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries