ಮುಂಬೈ: 11 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮಾಜಿ ಲೆಫ್ಟಿನೆಂಟ್ ಕರ್ನಲ್‌ಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿರುವ ಕೋರ್ಟ್ ಮಾರ್ಷಲ್ ಆದೇಶ ರದ್ದುಗೊಳಿಸಲು ಬಾಂಬೆ ಹೈಕೋರ್ಟ್ ನಿರಾಕರಿಸಿದ್ದು, ಸಂತ್ರಸ್ತ ಬಾಲಕಿಗೆ 'ಕೆಟ್ಟ ಸ್ಪರ್ಶ'ದ ಬಗ್ಗೆ ಚೆನ್ನಾಗಿ ತಿಳಿದಿತ್ತು ಎಂದು ಹೇಳಿದೆ.
ಆಕೆಯ ತಂದೆ ಕೊಠಡಿಯಿಂದ ಹೊರಹೋದ ನಂತರ ಆರೋಪಿಯು ತನ್ನೊಂದಿಗೆ ನಡೆದುಕೊಂಡ ರೀತಿ ಕುರಿತು ಸಂತ್ರಸ್ತೆ ಒದಗಿಸಿದ ಪುರಾವೆಗಳು ಘಟನೆ ಬಗ್ಗೆ ಸ್ಪಷ್ಟಚಿತ್ರಣ ನೀಡಿದೆ ಎಂದು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೆರೆ ಮತ್ತು ನೀಲಾ ಗೋಖಲೆ ಅವರಿರುವ ವಿಭಾಗೀಯ ಪೀಠ ಸೋಮವಾರ ಹೇಳಿದೆ.
ಜನರಲ್ ಕೋರ್ಟ್ ಮಾರ್ಷಲ್ (ಜಿಸಿಎಂ) ತನಗೆ ವಿಧಿಸಿರುವ ಐದು ವರ್ಷಗಳ ಜೈಲು ಶಿಕ್ಷೆಯನ್ನು ಎತ್ತಿಹಿಡಿದು ಸಶಸ್ತ್ರ ಪಡೆಗಳ ನ್ಯಾಯಮಂಡಳಿ (ಎಎಫ್‌ಟಿ) 2024ರ ಜನವರಿಯಲ್ಲಿ ನೀಡಿದ ಆದೇಶವನ್ನು ಪ್ರಶ್ನಿಸಿ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ಪೀಠವು ವಜಾಗೊಳಿಸಿತು.
2021ರ ಮಾರ್ಚ್‌ನಲ್ಲಿ, ಆರೋಪಿ ಬಾಲಕಿಯ ಮೇಲೆ ತೀವ್ರ ಲೈಂಗಿಕ ದೌರ್ಜನ್ಯ ಎಸಗಿರುವುದು ಸೇನೆಯ ಜಿಸಿಎಂ ಎದುರು ಸಾಬೀತಾಗಿದ್ದು, ಪೋಕ್ಸೊ ಕಾಯಿದೆಯಡಿಯಲ್ಲಿ ಆರೋಪಿಯನ್ನು ತಪ್ಪಿತಸ್ಥನೆಂದು ಪರಿಗಣಿಸಿ, ಕನಿಷ್ಠ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.




.jpg)

