ಕಾಸರಗೋಡು: ಜಿಲ್ಲೆಯ ಸಾಮಾಜಿಕ ನ್ಯಾಯ ಇಲಾಖೆಯ ಅಸ್ತಿತ್ವದಲ್ಲಿರುವ ಅನಾಥಾಶ್ರಮ ಕೌನ್ಸಿಲರ್ ಹುದ್ದೆಯ ನೇಮಕಾತಿ ನಡೆಸಲಾಗುವುದು. ಎಂ.ಎಸ್.ಡಬ್ಲ್ಯೂ ಅರ್ಹತೆಯಾಗಿದೆ. ಮೆಡಿಕಲ್ ಆಂಡ್ ಸೈಕಾಟ್ರಿಕ್ ಸೋಶಿಯಲ್ ವಕಿರ್ಂಗ್ ಎಂ.ಎಸ್.ಡಬ್ಲ್ಯೂ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ಎಂ.ಎಸ್.ಡಬ್ಲ್ಯೂ ವಿದ್ಯಾರ್ಹತೆಯ ಅನುಪಸ್ಥಿತಿಯಲ್ಲಿ ಮಕ್ಕಳ, ಅಂಗವಿಕಲರು, ಹಿರಿಯರು ಮತ್ತು ಮಹಿಳೆಯರ ಕ್ಷೇತ್ರದಲ್ಲಿ 10 ವರ್ಷಗಳ ಕೆಲಸದ ಅನುಭವದೊಂದಿಗೆ ಎಂ.ಎಸ್.ಸಿ ಸೈಕಾಲಜಿ ಅರ್ಹತೆ ಹೊಂದಿರುವವರು, ಮೇಲಿನ ಎರಡು ವಿಭಾಗಗಳಲ್ಲಿ ಅರ್ಜಿದಾರರ ಅಭಾವವಿದ್ದಲ್ಲಿ, ಪ್ರದೇಶದ ಮಕ್ಕಳ, ವಿಕಲಚೇತನರು, ವೃದ್ಧರು ಮತ್ತು ಮಹಿಳೆಯರ ಕ್ಷೇತ್ರದಲ್ಲಿ ಇಪ್ಪತ್ತು ವರ್ಷಗಳ ಕೆಲಸದ ಅನುಭವ ಹೊಂದಿರುವ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು.ಅರ್ಜಿದಾರರು 30 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ಅರ್ಜಿ ಫೆಬ್ರವರಿ 10ರಂದು ಸಂಜೆ 5 ಗಂಟೆಯೊಳಗೆ ಕಾಸರಗೋಡು ಸಿವಿಲ್ ಸ್ಟೇಷನ್ ನಲ್ಲಿರುವ ಜಿಲ್ಲಾ ಪಂಚಾಯತು ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿಗಳ ಕಛೇರಿಯಲ್ಲಿ ಸ್ವೀಕರಿಸಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ(04994255074)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




.webp)
