ಕಾಸರಗೋಡು: ನಗರದ ಕೂಡ್ಲು ಪಾರೆಕಟ್ಟ ಶಾಸ್ತಾನಗರದ ಭಜನಾಮಂದಿರವೊಂದರಲ್ಲಿ ದೇವರ ವಿಗ್ರಹಕ್ಕೆ ಅಳವಡಿಸಿದ್ದ ಚಿನ್ನದ ಸರ ಎಗರಿಸಿ ಆ ಜಾಗಕ್ಕೆ ಗಿಲೀಟಿನ ಆಭರಣ ತೊಡಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂದಿರ ಸಮಿತಿ ಮಾಜಿ ಕಾರ್ಯದರ್ಶಿ, ಕೂಡ್ಲು ಹೊಸಮನೆ ರಸ್ತೆ ಸನಿಹದ ನಿವಾಸಿ ದಯಾನಂದ ಶೆಟ್ಟಿ ಎಂಬಾತನನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂದಿರ ಸಮಿತಿ ಅಧ್ಯಕ್ಷ ಕೆ. ವೇಣುಗೋಪಾಲ್ ಅವರ ದೂರನ ಮೇರೆಗೆ ಈ ಬಂಧನ ನಡೆದಿದೆ. ಆಭರಣ 2.60ಲಕ್ಷ ರೂ. ಮೌಲ್ಯದ ನಾಲ್ಕು ಪವನು ಹೊಂದಿದ್ದು, ಇತ್ತೀಚೆಗೆ ಸರ ಶುಚೀಕರಣಕ್ಕಾಗಿ ತೆಗೆಯುತ್ತಿದ್ದಾಗ ನಕಲಿ ಆಭರಣವೆಂದು ತಿಳಿದು ಬಂದಿತ್ತು. ಈ ಬಗ್ಗೆ ಮಾಜಿ ಕಾರ್ಯದರ್ಶಿ ದಯಾನದ ಶೆಟ್ಟಿ ಅವರನ್ನು ಕರೆಸಿ ತಪಾಸಣೆ ನಡೆಸಿದರೂ, ಸಮರ್ಪಕ ಉತ್ತರ ಲಭಿಸದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ವಿಚಾರಣೆ ನಡೆಸಿದಾಗ ಅಸಲಿ ಚಿನ್ನ ತೆಗೆದು ಗಿಲೀಟಿನ ಆಭರಣ ತೊಡಿಸಿರುವ ಬಗ್ಗೆ ಮಾಹಿತಿ ಲಭಿಸಿತ್ತು.




.webp)
