ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಮಹಾಶಿವರಾತ್ರಿ ಉತ್ಸವದಂಗವಾಗಿ ಬುಧವಾರ ಬೆಳಗ್ಗೆ ಗಣಪತಿ ಹೋಮ, ಬೆಳಗಿನ ಪೂಜೆ, ಶ್ರೀ ಉದನೇಶ್ವರ ಭಜನ ಸಂಘ ಪೆರಡಾಲ ಇವರ ನೇತೃತ್ವದಲ್ಲಿ ವಿವಿಧ ಭಜನ ಸಂಘಗಳ ಸಹಯೋಗದೊಂದಿಗೆ ಏಕಾಹ ಭಜನೆ, ಶತರುದ್ರಾಭಿಷೇಕ, ಮಧ್ಯಾಹ್ನ ತುಲಭಾರ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ ಜರಗಿತು. ನಾಡಿನ ವಿವಿಧೆಡೆಗಳಿಂದ ಭಗವದ್ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನಗೈದು, ಪ್ರಸಾದ ಭೋಜನ ಸ್ವೀಕರಿಸಿದರು.
ಸಂಜೆ ದೀಪಾರಾಧನೆ, ಗಂಗಾಧರ ಮಾರಾರ್ ನೀಲೇಶ್ವರ ಮತ್ತು ಬಳಗದವರಿಂದ ತಾಯಂಬಕ, ರಾತ್ರಿ ನೃತ್ಯ ಕಾರ್ಯಕ್ರಮ, ಮುದ್ದುಕೃಷ್ಣ ಬಳಗ ಚುಕ್ಕಿನಡ್ಕ ಇವರಿಂದ ಹಾಸ್ಯಮಯ ಕಾರ್ಯಕ್ರಮ ಜರಗಿತು. ಶ್ರೀ ಉದನೇಶ್ವರ ಯಕ್ಷಗಾನ ಕಲಾಸಂಘ ಪೆರಡಾಲ ಮತ್ತು ಆಹ್ವಾನಿತ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ಕೊಲ್ಲೂರು ಕ್ಷೇತ್ರ ಮಹಾತ್ಮೆ, ಶ್ರೀ ದೇವರ ಬಲಿ ಉತ್ಸವ, ನವಕಾಭಿಷೇಕ, ವಸಂತಪೂಜೆ, ಶ್ರೀಭೂತಬಲಿ ಜರಗಿತು. ಗುರುವಾರ ಶ್ರೀದೇವರ ಬಲಿ ಉತ್ಸವ, ಬಟ್ಟಲುಕಾಣಿಕೆ ರಾಜಾಂಗಣ ಪ್ರಸಾದ, ಮಧ್ಯಾಹ್ನ ಶ್ರೀ ಪಿಲಿಚಾಮುಂಡಿ ದೈವದ ಕೋಲ, ಅರಸಿನ ಹುಡಿ, ಪ್ರಸಾದ ಭೋನದೊಂದಿಗೆ ಸಂಪನ್ನವಾಗಲಿದೆ.
(


