ಕಾಸರಗೋಡು: ನೀರಿನ ಮೂಲಗಳನ್ನು ಕಲುಷಿತಗೊಳಿಸುತ್ತಿರುವ ಬಾರಿಕ್ಕಾಡಿನ ಅಭಯಂ ಡಯಾಲಿಸಿಸ್ ಕೇಂದ್ರದ ಕಾರ್ಯಾಚರಣೆ ಪರವಾನಗಿಯನ್ನು ರದ್ದುಗೊಳಿಸಬೇಕು, ಅಭಯಂ ಆಶ್ರಯದಲ್ಲಿರುವ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಬೇಕು, ಪಂಚಾಯಿತಿ ಆಡಳಿತ ಸಮಿತಿ ಮತ್ತು ಆಶ್ರಯ ಆಡಳಿತ ಮಂಡಳಿಯ ಅಪವಿತ್ರ ಸಂಬಂಧ ಕೊನೆಗೊಳಿಸಬೇಕು ಮುಂತಾದ ಬೇಡಿಕೆ ಮುಂದಿರಿಸಿ ಜನಪರ ಕ್ರಿಯಾ ಸಮಿತಿ ಚೆಂಗಳ ಪಂಚಾಯಿತಿ ಸಮಿತಿ ವತಿಯಿಂದ ಚೆಂಗಳ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಯಿತು.
ಡಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಸಿ.ಪ್ರಭಾಕರನ್ ಧರಣಿ ಉದ್ಘಾಟಿಸಿದರು. ಕ್ರಿಯಾ ಸಮಿತಿ ಅಧ್ಯಕ್ಷ ಎ. ಮುಹಮ್ಮದ್‍ಕುಞÂ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖ ಸಾಮಾಜಿಕ ಮತ್ತು ಪರಿಸರ ಹೋರಾಟಗಾರ ಡಾ.ಡಿ.ಸುರೇಂದ್ರನಾಥ್ ಮುಖ್ಯ ಭಾಷಣ ಮಾಡಿದರು. ಮೇರಿ ಅಬ್ರಹಾಂ, ಖಾದರ್ ಅರಫಾ, ನಹಾವುದ್ದೀನ್, ಅಬ್ದುಲ್ ರಜಾಕ್ ಮಾಸ್ಟರ್, ಸತ್ತಾರ್ ಹಾಜಿ, ಕ್ರಿಯಾ ಸಮಿತಿ ಸಂಚಾಲಕ ಪಿ.ಬಿ ಕೃಷ್ಣನ್, ಬೇಬಿ ದಾಮೋದರನ್ ಹಾಗೂ ತನಾನಿ ಅಬ್ದುಲ್ ಸಲಾಂ ಉಪಸ್ಥಿತರಿದ್ದರು. ಕ್ರಿಯಾ ಸಮಿತಿ ಜಂಟಿ ಸಂಚಾಲಕ ಬಿ. ಅಬ್ದುಲ್ ಮುನೀರ್ ಸ್ವಾಗತಿಸಿದರು. ಪಿಎ ಹನೀಫ ವಂದಿಸಿದರು.





