ಕಾಸರಗೋಡು: ಅಂಚೆ ಇಲಾಖೆ ಕಾಸರಗೋಡು ವಿಭಾಗದ ವಿವಿಧ ಕೇಂದ್ರಗಳಲ್ಲಿ ಉಪ ಅಂಚೆ ಕಛೇರಿಗಳ ಕಾರ್ಯಾಚರಣೆಗಾಗಿ ಸಾರ್ವಜನಿಕ ಹಿತಾಸಕ್ತಿಯನ್ವಯ ಕಟ್ಟಡಗಳನ್ನು ನಿರ್ಮಿಸಲು ಉಚಿತವಾಗಿ ಭೂಮಿ ಅಥವಾ ಕಟ್ಟಡಗಳನ್ನು ಹಸ್ತಾಂತರಿಸಲು ಇಚ್ಛಿಸುವ ಕಟ್ಟಡ ಮಾಲೀಕರಿಂದ ಸಮ್ಮತಿಪತ್ರ ಒಳಗೊಂಡ ಅರ್ಜಿ ಅಹ್ವನಿಸಲಾಗಿದೆ.
ಕಾಞಂಗಾಡಿನ ಆನಂದಾಶ್ರಮ, ಬೇಕಲ್, ಚಿತ್ತಾರಿಕಲ್, ಎಲಂಬಚ್ಚಿ, ಪಡನ್ನ , ಪರಪ್ಪ, ಪೆರಿಯ, ರಾಜಪುರಂ, ತುರುತ್ತಿ, ತ್ರಿಕರಿಪುರ, ಉದುಮ, ವೆಳ್ಳರಿಕುಂಡ್, ಕಳನಾಡ್, ಮಂಗಲ್ಪಾಡಿ, ಪೈವಳಿಕೆ ಮುಂತಾದೆಡೆ ಕಟ್ಟಡ ಯಾ ಜಾಗ ಅಗತ್ಯವಿದೆ ಎಂದು ಕಾಸರಗೋಡು ವಿಭಾಗ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




