ಮುಂದಿನ 2-3 ವರ್ಷಗಳಲ್ಲಿ 200 'ವಂದೇ ಭಾರತ್', 100 'ಅಮೃತ್ ಭಾರತ್' ಮತ್ತು 50 'ನಮೋ ಭಾರತ್' ರೈಲುಗಳನ್ನು ನಿರ್ಮಿಸುವ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ ಎಂದರು.
'ಮುಂದಿನ ಕೆಲವು ವರ್ಷಗಳಲ್ಲಿ 17,500 ಹೊಸ ಬೋಗಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. 2025-26ರಲ್ಲಿ 2,000 ಬೋಗಿಗಳನ್ನು ನಿರ್ಮಿಸುವ ಗುರಿ ನಮ್ಮದು' ಎಂದು ತಿಳಿಸಿದರು.
'₹4.6 ಲಕ್ಷ ಕೋಟಿ ಮೊತ್ತದ ಹೊಸ ಯೋಜನೆಗಳನ್ನು ಬಜೆಟ್‌ನಲ್ಲಿ ಸೇರಿಸಲಾಗಿದ್ದು, ಮುಂದಿನ ನಾಲ್ಕೈದು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಹೊಸ ಹಳಿಗಳ ನಿರ್ಮಾಣ, ದ್ವಿಪಥ ಮತ್ತು ಚತುಷ್ಪಥ ಕಾಮಗಾರಿ, ನಿಲ್ದಾಣಗಳ ನವೀಕರಣ, ಮೇಲ್ಸೇತುವೆ ಹಾಗೂ ಅಂಡರ್‌ಪಾಸ್‌ಗಳಿಗೆ ಸಂಬಂಧಿಸಿದ ಯೋಜನೆಗಳು ಇವು' ಎಂದು ಮಾಹಿತಿ ನೀಡಿದರು.




