ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 10 ಹಾಗೂ 12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಶನಿವಾರ ಆರಂಭವಾಗಿವೆ.
24.12 ಲಕ್ಷ 10ನೇ ತರಗತಿ ವಿದ್ಯಾರ್ಥಿಗಳು ಹಾಗೂ 17.88 ಲಕ್ಷ 12ನೇ ವಿದ್ಯಾರ್ಥಿಗಳು ಸೇರಿ ಒಟ್ಟು 40 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ದೇಶದಾದ್ಯಂತ ಹಾಗೂ ಹೊರದೇಶಗಳಲ್ಲಿ ಇರುವ 7,800 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ.
ನೇಪಾಳ, ಜಪಾನ್, ಕತಾರ್, ಒಮನ್ ಸೇರಿದಂತೆ ಯುಎಇ ಮತ್ತು ಇತರೆ ದೇಶಗಳಲ್ಲೂ ಕೂಡ ಪರೀಕ್ಷೆ ನಡೆಯಲಿದೆ.
10ನೇ ತರಗತಿಯ ಪರೀಕ್ಷೆಗಳು 84 ವಿಷಯಗಳನ್ನು ಒಳಗೊಂಡಿದ್ದು, ಮಾರ್ಚ್ 18ರಂದು ಪರೀಕ್ಷೆಗಳು ಮುಕ್ತಾಯವಾಗಲಿವೆ. 12ನೇ ತರಗತಿಯ ಪರೀಕ್ಷೆಗಳು 120 ವಿಷಯಗಳನ್ನು ಒಳಗೊಂಡಿದ್ದು, ಏಪ್ರಿಲ್ 4ರಂದು ಮುಕ್ತಾಯವಾಗಲಿವೆ.






