ChatGPT ಮತ್ತು DeePSeeK ನಂತಹ AI ಪರಿಕರಗಳನ್ನು ಬಳಸಬೇಡಿ ಎಂದು ಭಾರತ ಹಣಕಾಸು ಸಚಿವಾಲಯ ತನ್ನ ನೌಕರರಿಗೆ ಹೇಳಿದೆ ಎಂದು ಬುಧವಾರ ವರದಿಯಾಗಿದೆ.
ಹೌದು, ಸರ್ಕಾರಿ ದಾಖಲೆ ಮತ್ತು ದತ್ತಾಂಶಗಳ ಗೌಪ್ಯತೆಗೆ ಅಪಾಯ ಉಂಟುಮಾಡುವ ಸಾಧ್ಯತೆಯನ್ನು ಉಲ್ಲೇಖಿಸಿ, ಹಣಕಾಸು ಸಚಿವಾಲಯ ತನ್ನ ಉದ್ಯೋಗಿಗಳಿಗೆ AI ಪರಿಕರಗಳನ್ನು ಅಧಿಕೃತ ಉದ್ದೇಶಗಳಿಗಾಗಿ ಬಳಸಬೇಡಿ ಎಂದು ಅಂತರಿಕ ಇಲಾಖೆಯ ಸಲಹ ಸಂಸ್ಥೆ ಹೇಳಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಆಸ್ಟ್ರೇಲಿಯಾ ಮತ್ತು ಇಟಲಿಯಂತಹ ದೇಶಗಳು ಡೇಟಾ ಭದ್ರತೆಯ ಅಪಾಯ ಉಲ್ಲೇಖಿಸಿ ಈ ಪರಿಕರಣಗಳನ್ನು ನಿರ್ಬಂಧಿಸಿದೆ. ಓಪೆನ್ ಎಐ ಮುಖ್ಯಸ್ಥ ಇಂದು(ಫೆ.5) ಭೇಟಿ ನೀಡಲಿದ್ದು, ಅವರು ಭೇಟಿ ನೀಡುವ ಮುನ್ನ ಈ ಬೆಳಗಣಿಗೆ ನಡೆದಿದೆ.
ಕಚೇರಿ ಕಂಪ್ಯೂಟರ್ಗಳಲ್ಲಿನ ಕಚೇರಿ ಸಾಧನಗಳಲ್ಲಿ AI ಪರಿಕರ ಮತ್ತು AI ಅಪ್ಲಿಕೇಶನ್ಗಳನ್ನು ಸರ್ಕಾರಿ ಡೇಟಾ ಮತ್ತು ಗೌಪ್ಯತೆಗೆ ಅಪಾಯ ಉಂಟು ಮಾಡುತ್ತದೆ ಎಂದು ಜ.29ರಂದೇ ಭಾರತ ಹಣಕಾಸು ಇಲಾಖೆ ಎಚ್ಚರಿಸಿತ್ತು. ಆದರೆ, ಇದೀಗ ಅಂತರಿಕ ಇಲಾಖೆಯ ಸಲಹ ಸಂಸ್ಥೆ ಪುನರುಚ್ಚಿಸಿದೆ.
ಭಾರತ ಹಣಕಾಸು ಇಲಾಖೆ ಅಧಿಕಾರಿಗಳಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮೂಲಗಳ ಪ್ರಕಾರ ಮೂವರು ಅಧಿಕಾರಿಗಳು ಈ ಬಗ್ಗೆ ಧೃಢಿಕರಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.




