ಉಪ್ಪಳ: ಕಾಲಹರಣಗೊಂಡು ಸಂಚಾರ ಅಯೋಗ್ಯವಾಗಿ ತಿಂಗಳ ಹಿಂದೆ ಸಂಚಾರ ನಿಷೇಧಿಸಿದ್ದ ಪೈವಳಿಗೆ ಪಂಚಾಯತಿ ಉರ್ಮಿ ವಿ.ಸಿ.ಬಿ. ಸೇತುವೆಯನ್ನು ಪುನರ್ನಿರ್ಮಿಸಲಾಗುತ್ತಿದೆ.
1.23 ಕೋಟಿ ರೂ.ಗಳ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದಾರೆ.
ಪೈವಳಿಗೆ ಪಂಚಾಯತಿಯ ಕಡೆಂಕೋಡಿ ವಾರ್ಡ್‍ನಲ್ಲಿರುವ ಉರ್ಮಿ ಹೊಳೆಗೆ ಅಡ್ಡಲಾಗಿ ದಶಕಗಳ ಹಿಂದೆ ನಿರ್ಮಿಸಲಾದ ವಿಸಿಬಿ ಹಳೆಯದಾಗಿ ಅಸುರಕ್ಷಿತವಾಗಿದ್ದರಿಂದ ಸೇತುವೆಯನ್ನು ಮುಚ್ಚಿ ಸಂಚಾರ ನಿಷೇಧಿಸಲಾಗಿತ್ತು. ಇದರಿಂದ ಉರ್ಮಿ, ಪಲ್ಲಕ್ಕುಡೇಲು, ಕೊಮ್ಮಂಗಳ ಮತ್ತು ಕುರುಡಪದವು ಪ್ರದೇಶಗಳ ನಾಗರಿಕರು, ವಿದ್ಯಾರ್ಥಿಗಳು, ವ್ಯಾಪಾರಿಗಳು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು.
ಈ ಪ್ರದೇಶಗಳಲ್ಲಿನ ವಿವಿಧ ಕೃಷಿ ಭೂಮಿಗಳಿಗೆ ನೀರಿನ ಲಭ್ಯತೆಯೂ ನಿಂತುಹೋಗಿತ್ತು. ಸಣ್ಣ ನೀರಾವರಿ ಇಲಾಖೆಯ ಯೋಜನಾ ನಿಧಿಯಿಂದ ವಿಸಿಬಿ ನಿರ್ಮಾಣಕ್ಕೆ ಹಣವನ್ನು ಹಂಚಿಕೆ ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ತಕ್ಷಣ ಕಾಮಗಾರಿ ಆರಂಭಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕರು ಪ್ರಕಟಿಸಿರುವರು.




.jpg)
