ಕಾಸರಗೋಡು: ಜಿಲ್ಲಾ ಪಂಚಾಯತಿ ಮತ್ತು ಸಾಂಸ್ಕೃತಿಕ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿರುವ ಸಮಂ ಸಾಂಸ್ಕೃತಿಕ ಜಾತ್ರೆ ಮಾರ್ಚ್ 14,15,16 ರಂದು ಮಡಿಕೈ ಅಂಬಲತ್ತುಕರೆಯ ಟಿ ಎಸ್ ತಿರುಮುಂಬು ಸಾಂಸ್ಕೃತಿಕ ಸಭಾಭವನದಲ್ಲಿ ನಡೆಯಲಿದೆ.
“ಸಮಂ”ನ ಭಾಗವಾಗಿ ಮಹಿಳಾ ಒಕ್ಕೂಟಗಳಿಂದ ಮೂರು ದಿನ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುವುದು. 14 ರಂದು ನಡೆಯುವ ಸಾಂಸ್ಕೃತಿಕ ಮೆರವಣಿಗೆಯೊಂದಿಗೆ “ಸಮಂ” ಪ್ರಾರಂಭವಾಗಲಿದೆ. ಅಂದು ಸಂಜೆ ಸಾಂಸ್ಕೃತಿಕ ಸಮ್ಮೇಳನ ಹಾಗೂ ವಿವಿಧ ಕಲಾ ಕಾರ್ಯಕ್ರಮಗಳು ನಡೆಯಲಿವೆ. ಮಡಿಕೈ ಕುಟುಂಬಶ್ರೀಯ ಪೂರಕ್ಕಳಿ ಹಾಗೂ ಕೇರಳ ಸಂಗೀತ ನಾಟಕ ಅಕಾಡಮಿಯ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ “ ಮಾಡನ್ ಮೋಕ್ಷo” ನಾಟಕ ಪ್ರದರ್ಶನ ಗೊಳ್ಳಲಿದೆ. 15 ರಂದು ವಿವಿಧ ವಲಯಗಳಲ್ಲಿ ತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸಿದ ವ್ಯಕ್ತಿಗಳ ಅನುಭವ ಕಥನ, “ಉಯಿಪ್ಪಿರ್ಂಡೆ ವಿಯಪ್ಪು9ಗಳ್”, ಸಜೀವನ್ ಇಡೈಲಕ್ಕಾಡ್ ಅವರ “ಗಜಲ್ ಸಂದ್ಯಾ”, ಜಿಲ್ಲೆಯ ವಿವಿಧ ಸಾಂಸ್ಕೃತಿಕ ಕೇಂದ್ರಗಳು ಮತ್ತು ಕುಟುಂಬಶ್ರೀಗಳಿಂದ ಕಲಾ ಕಾರ್ಯಕ್ರಮಗಳು ನಡೆಯಲಿವೆ. ಕೊನೆಯ ದಿನವಾದ ಮಾರ್ಚ್ 16 ರಂದು ಮಹಿಳಾ ಪ್ರತಿನಿಧಿಗಳ ಸಂಗಮ, ಉಪನ್ಯಾಸ ಮತ್ತು ದಂಪತಿ ನೃತ್ಯ, ಅಲ್ತಾರಾ ಬ್ಯಾಂಡ್ ಪ್ರದರ್ಶಿಸುವ ಸಮ್ಮಿಶ್ರ ಗೀತೆ, ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಮೂರು ದಿನನಡೆಯುವ ಈ ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕರ್ತರು ಭಾಗವಹಿಸಲಿದ್ದಾರೆ.



