ತಿರುವನಂತಪುರಂ: ಫೆಬ್ರವರಿ 2, 2025 ರಂದು ನಡೆಸಲಾದ ರಾಜ್ಯ ಅರ್ಹತಾ ಪರೀಕ್ಷೆಯ (ಎಸ್.ಇ.ಟಿ.) ಫಲಿತಾಂಶಗಳನ್ನು ಪ್ರಕಟಿಸಲಾಗಿದೆ.
ಪರೀಕ್ಷಾ ಫಲಿತಾಂಶಗಳು www.lbscentre.kerala.gov.in, www.prd.kerala.gov.in ಮತ್ತು www.kerala.gov.in ವೆಬ್‍ಸೈಟ್‍ಗಳಲ್ಲಿ ಲಭ್ಯವಿರುತ್ತವೆ. ಒಟ್ಟು 20,719 ಮಂದಿ ಪರೀಕ್ಷೆ ಬರೆದಿದ್ದು, ಅದರಲ್ಲಿ 4,324 ಜನರು ಉತ್ತೀರ್ಣರಾಗಿದ್ದಾರೆ. ಯಶಸ್ಸಿನ ಪ್ರಮಾಣ 20.07 ರಷ್ಟಿದೆ. ಸೆಟ್ ಪ್ರಮಾಣಪತ್ರಗಳನ್ನು ಪಡೆಯಲು ಅರ್ಜಿ ನಮೂನೆಯನ್ನು ಎಲ್‍ಬಿಎಸ್ ಕೇಂದ್ರದ ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಂಡು, ಭರ್ತಿ ಮಾಡಿ ವಿವಿಧ ದಾಖಲೆಗಳೊಂದಿಗೆ ನಿರ್ದೇಶಕರು, ಎಲ್‍ಬಿಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ, ಪಾಳಯಂ, ತಿರುವನಂತಪುರಂ-33 ಇಲ್ಲಿಗೆ ಕಳುಹಿಸಬೇಕು. ಜೂನ್ ನಿಂದ ಸೆಟ್ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು. ಸೆಟ್ ಪ್ರಮಾಣಪತ್ರಕ್ಕಾಗಿ ಅರ್ಜಿ ನಮೂನೆಯು ಏಪ್ರಿಲ್ 1 ರಿಂದ ವೆಬ್‍ಸೈಟ್‍ನಲ್ಲಿ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ: 0471 2560311, 312, 313, www.lbscentre.kerala.gov.in ವೀಕ್ಷಿಸಬಹುದು..





