ತಿರುವನಂತಪುರಂ: ಅಪ್ರಾಪ್ತ ಮಕ್ಕಳಿಗೆ ಕಿರುಕುಳ ನೀಡಿದ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಾಗಿದೆ. ಕಾಟ್ಟಾಕಡದ ಪೆಜುಮ್ಮೂಡುವಿನಲ್ಲಿರುವ ಅನುದಾನಿತ ಶಾಲೆಯ ಅರೇಬಿಕ್ ಶಿಕ್ಷಕ ಅನ್ಸಾರಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಕೊಲ್ಲಂನ ಕುಂದರ ಮೂಲದ ಅನ್ಸಾರಿ ಪರಾರಿಯಾಗಿದ್ದಾನೆ.
ಮಕ್ಕಳ ಕಲ್ಯಾಣ ಸಮಿತಿಗೆ ದೊರೆತ ಗೌಪ್ಯ ಮಾಹಿತಿಯ ಮೇರೆಗೆ ಕಳೆದ ವಾರ ಮಕ್ಕಳನ್ನು ಕೌನ್ಸೆಲಿಂಗ್‍ಗೆ ಒಳಪಡಿಸಿದಾಗ ಈ ಮಾಹಿತಿ ಬೆಳಕಿಗೆ ಬಂದಿದೆ. ಒಂಬತ್ತು ಅಪ್ರಾಪ್ತ ವಯಸ್ಕರ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಕ್ಕಳು ಒಂಬತ್ತು ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರು.
ಘಟನೆಗೆ ಸಂಬಂಧಿಸಿದಂತೆ ಕಾಟ್ಟಾಕಡ ಪೋಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಪ್ರಸ್ತುತ ಆತನ ವಿರುದ್ಧ ಐದು ಪ್ರಕರಣಗಳು ದಾಖಲಾಗಿವೆ. ಆರೋಪಿಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ. ಶಂಕಿತ ವ್ಯಕ್ತಿ ಊರಿಗೆ ತೆರಳಿದ್ದಾನೆ ಎಂಬುದು ಪ್ರಾಥಮಿಕ ಮಾಹಿತಿ.





