ಕುಂಬಳೆ: ಮುಜುಂಗಾವಿನ ಶ್ರೀ ಭಾರತೀವಿದ್ಯಾಪೀಠದ ಈ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಸ್ಪಂದನ (ಬೀಳ್ಕೊಡುಗೆ)ಕಾರ್ಯಕ್ರಮವು ಶನಿವಾರ ವಿದ್ಯಾರ್ಥಿಗಳ ವಿವಿಧ ಚಟುವಟಿಕೆಗಳೊಂದಿಗೆ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಲಯದ ಆಡಳಿತ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಕಿದೂರು ವಹಿಸಿ ಮಾತನಾಡಿ, ಜೀವನ ಮೌಲ್ಯಗಳ ಬಗ್ಗೆ ನಾವು ನೀಡಬೇಕಾದ ಮಹತ್ವವನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಬೇಕೆಂದು ಕಿವಿಮಾತು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಚೆಕ್ಕಣಿಕೆ ವಿದ್ಯಾರ್ಥಿಗಳ ನಡೆನುಡಿಗಳ ಬಗ್ಗೆ ಸಲಹೆ ನೀಡಿದರು.
ಮುಖ್ಯೋಪಾಧ್ಯಾಯ ಶ್ಯಾಂಭಟ್ ದರ್ಭೆಮಾರ್ಗ. ವಿದ್ಯಾಲಯಕ್ಕೆ ವಿದ್ಯಾರ್ಥಿಗಳು ಸ್ಪಂದಿಸಬೇಕು.ನಿಮ್ಮನ್ನು ಕಳುಹಿಸಿ ಕೊಡುವುದಲ್ಲ ಎಂಬ ವಿವರಣೆಯೊಂದಿಗೆ ಸ್ಪಂದನದ ಮೂಲೋದ್ದೇಶವನ್ನು ತಿಳಿಸಿದರು.
ಅಧ್ಯಾಪಿಕೆ ಚಿತ್ರಾ ಸರಸ್ವತಿ ಮಕ್ಕಳ ಸ್ಥಾನವನ್ನು ಮೇಲಕ್ಕೇರಿಸುವ ಅರ್ಥ ವಿವರಣೆಯೊಂದಿಗೆ ಸ್ಪಂದನದ ಮೂಲೋದ್ದೇಶ,ಮಕ್ಕಳು ಮುಂದೆಯೂ ಶಾಲೆಯ ಬಗ್ಗೆ ವಹಿಸಬೇಕಾದ ಕಾಳಜಿ ತಿಳಿಸಿದರು.
ವಿದ್ಯಾಲಯದ ವತಿಯಿಂದ ವಿದ್ಯಾರ್ಥಿಗಳಿಗೆ ಜ್ಞಾನದ ಪ್ರತೀಕವಾದ ದೀಪಗಳನ್ನು ಸ್ಮರಣಿಕೆಗಳಾಗಿ ನೀಡಲಾಯಿತು. ಒಂಬತ್ತನೆ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಸಂಯೋಜಿಸಿ, ನಿರೂಪಿಸಿದರು.




.jpg)


