HEALTH TIPS

ಹಣದುಬ್ಬರದಲ್ಲಿ ಕೇರಳಕ್ಕೆ ಮೊದಲ ಸ್ಥಾನ: ಭಾರತದಲ್ಲಿ ಆಹಾರ ಹಣದುಬ್ಬರ ಕೇವಲ ಶೇ. 3.6 ರಷ್ಟು: ಕೇರಳದಲ್ಲಿ ಶೇ. 7.3.

ನವದೆಹಲಿ: ಆಹಾರ ಹಣದುಬ್ಬರದ ವಿರುದ್ಧ ಹೋರಾಡುತ್ತಿರುವ ಕೇಂದ್ರ ಸರ್ಕಾರವು ಫೆಬ್ರವರಿ 2025 ರಲ್ಲಿ ಅದನ್ನು ಶೇಕಡಾ 3.6 ರಲ್ಲಿ ಕಾಯ್ದುಕೊಳ್ಳಲು ಸಾಧ್ಯವಾದರೂ, ನಮ್ಮ ಕೇರಳವು ಭಾರತದಲ್ಲಿ ಅತಿ ಹೆಚ್ಚು ಹಣದುಬ್ಬರ ಹೊಂದಿರುವ ರಾಜ್ಯವಾಗಿದೆ. ಇಲ್ಲಿ ಆಹಾರ ಬೆಲೆ ಹಣದುಬ್ಬರ ಶೇ. 7.3 ರಷ್ಟಿದೆ.

ರಿಸರ್ವ್ ಬ್ಯಾಂಕಿನ ಹಣದುಬ್ಬರ ಮಿತಿ ಆರು ಪ್ರತಿಶತದವರೆಗೆ ಇದೆ. ಆದರೆ, ಕೇರಳದ ಹಣದುಬ್ಬರ ದರ ಶೇ.7.3ಕ್ಕೆ ಏರಿದ್ದು, ರಿಸರ್ವ್ ಬ್ಯಾಂಕಿನ ಗುರಿಯನ್ನು ಮೀರಿದೆ. ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್.ಎಸ್.ಒ) ಪ್ರಕಾರ, ಭಾರತದಲ್ಲಿ ಹಣದುಬ್ಬರವು ಜನವರಿ 2025 ರಲ್ಲಿ ಶೇಕಡಾ 4.3 ರಷ್ಟಿತ್ತು. ಅದನ್ನೇ ಮೋದಿ ಸರ್ಕಾರ ಕಠಿಣ ನೀತಿಗಳ ಮೂಲಕ ಶೇ. 3.6ಕ್ಕೆ ತಂದಿತು.

ಸಾಲ ಪಡೆಯುವುದನ್ನು ಬಿಟ್ಟು ಬೇರೇನನ್ನೂ ಇಪ್ಟಪಡದ ಕೇರಳ, ಅದನ್ನು ಶೇಕಡಾ 7.3 ಕ್ಕೆ ತಂದಿತು. ಕೇರಳದ ನಂತರ, ಛತ್ತೀಸ್‍ಗಢದಲ್ಲಿ ಅತಿ ಹೆಚ್ಚು ಬೆಲೆ ಏರಿಕೆ ಇದೆ. ಅಂದರೆ ಶೇ. 4.9. ಕರ್ನಾಟಕ ಮತ್ತು ಬಿಹಾರದಲ್ಲಿ ಇದು ತಲಾ ಶೇ. 4.5 ರಷ್ಟಿದೆ.

ಇದೇ ವೇಳೆ, ಕೆಲವು ರಾಜ್ಯಗಳಲ್ಲಿ ಆಹಾರ ಬೆಲೆಗಳ ಹಣದುಬ್ಬರವು ತುಂಬಾ ಕಡಿಮೆ ಇರುವುದರಿಂದ ಭಾರತದ ಹಣದುಬ್ಬರ ಕ್ರಮಬದ್ಧತೆ ಕಾಯ್ದುಕೊಳ್ಲಲು ಸಾಧ್ಯವಾಯಿತು. ದೆಹಲಿಯಲ್ಲಿ ಇದು ಕೇವಲ 1.5 ಪ್ರತಿಶತದಷ್ಟಿದೆ. ತೆಲಂಗಾಣದಲ್ಲಿ ಇದು ಶೇ. 1.3 ರಷ್ಟಿದ್ದರೆ, ಆಂಧ್ರಪ್ರದೇಶದಲ್ಲಿ ಇದು ಶೇ. 2.4 ರಷ್ಟಿದೆ. ರಾಷ್ಟ್ರೀಯ ಅಂಕಿಅಂಶ ಕಚೇರಿ ಸಮೀಕ್ಷೆ ನಡೆಸಿದ 22 ರಾಜ್ಯಗಳ ಪೈಕಿ 13 ರಾಜ್ಯಗಳಲ್ಲಿ ಆಹಾರ ಬೆಲೆ ಹಣದುಬ್ಬರವು ನಾಲ್ಕು ಪ್ರತಿಶತಕ್ಕಿಂತ ಕಡಿಮೆಯಿತ್ತು. ರಿಸರ್ವ್ ಬ್ಯಾಂಕಿನ ಹಣದುಬ್ಬರ ಗುರಿ ಶೇಕಡಾ ನಾಲ್ಕು ರಿಂದ ಪ್ರಾರಂಭವಾಗುತ್ತದೆ. ದೇಶವು ಸಹಿಸಿಕೊಳ್ಳಬಲ್ಲ ಗರಿಷ್ಠ ಹಣದುಬ್ಬರ ದರ ಆರು ಪ್ರತಿಶತ ಇದೆ.

ಕೇರಳದ ಗ್ರಾಹಕ ಸಂಸ್ಕøತಿ ಖಳನಾಯಕನಾಗುತ್ತಿದೆ:.

ಕೇರಳದಲ್ಲಿ ಜನರು ಉಪ್ಪಿನಿಂದ ಕರ್ಪೂರದವರೆಗೆ ಎಲ್ಲವನ್ನೂ ಖರೀದಿಸಿ ಬಳಸುವುದರ ಮೇಲೆ ಮಾತ್ರ ಗಮನಹರಿಸುತ್ತಾರೆ, ಹೀಗಿದ್ದಾಗ ಬೆಲೆಗಳು ಹೆಚ್ಚಾಗದಿದ್ದರೆ ಆಶ್ಚರ್ಯಪಡಬೇಕು. ಇಲ್ಲಿನ ಕೃಷಿ ವಲಯ ಕುಸಿತದ ಹಾದಿಯಲ್ಲಿದೆ. ನಿವೃತ್ತ ರಾಜ್ಯ ಸರ್ಕಾರಿ ನೌಕರರು ಮತ್ತು ಶಿಕ್ಷಕರ ಪಿಂಚಣಿಗಳನ್ನು ಪೋಲು ಮಾಡುತ್ತಿರುವ ರಾಜ್ಯದಲ್ಲಿ ಯಾವುದೇ ರಚನಾತ್ಮಕ ಕ್ರಮ ಕೈಗೊಳ್ಳುತ್ತಿಲ್ಲ. ಕೃಷಿ ಹೆಚ್ಚಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮತ್ತು ಬೆಲೆಗಳು ಹೆಚ್ಚಾಗದಿದ್ದರೆ ಆಶ್ಚರ್ಯಪಡಬೇಕಿಲ್ಲವಷ್ಟೇ. ಕೇರಳ ಸರ್ಕಾರಕ್ಕೆ ಹೇಗಾದರೂ ಮಾಡಿ ಕೇಂದ್ರದಲ್ಲಿ ಹೆಚ್ಚಿನ ಸಾಲ ಸಂಗ್ರಹಿಸುವುದನ್ನು ಬಿಟ್ಟು ಬೇರೆ ಯಾವುದೇ ಆಸಕ್ತಿ ಇಲ್ಲ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries