ತಿರುವನಂತಪುರಂ: ಐಟಿಬಿ ಬರ್ಲಿನ್‍ನಲ್ಲಿ ನಡೆದ ಗೋಲ್ಡನ್ ಸಿಟಿ ಗೇಟ್ ಅವಾಡ್ರ್ಸ್ 2025 ರಲ್ಲಿ ಕೇರಳ ಪ್ರವಾಸೋದ್ಯಮವು ಜಾಗತಿಕ ಮನ್ನಣೆಯನ್ನು ಪಡೆಯಿತು.
'ಕೇರಳಕ್ಕೆ ಜೊತೆಗೆ ಬನ್ನಿ' ಎಂಬ ಮಾರ್ಕೆಟಿಂಗ್ ಅಭಿಯಾನವು ಅಂತರರಾಷ್ಟ್ರೀಯ ಅಭಿಯಾನ ವಿಭಾಗದಲ್ಲಿ ಸಿಲ್ವರ್ ಸ್ಟಾರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ‘ಶುಭಮಾಂಗಲ್ಯಂ-ಕೇರಳದಲ್ಲಿ ಮದುವೆಗಳು’ ಎಂಬ ವಿಡಿಯೋ ಹಾಡು ಅಂತರರಾಷ್ಟ್ರೀಯ ವಿಭಾಗದಲ್ಲಿ ಅತ್ಯುತ್ತಮ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಬರ್ಲಿನ್‍ನಲ್ಲಿ ನಡೆದ ಸಮಾರಂಭದಲ್ಲಿ ಪ್ರವಾಸೋದ್ಯಮದ ಹೆಚ್ಚುವರಿ ಮಹಾನಿರ್ದೇಶಕ ವಿಷ್ಣು ರಾಜ್ ಪಿ ಅವರು ಗೋಲ್ಡನ್ ಸಿಟಿ ಗೇಟ್ ಪ್ರಶಸ್ತಿ ತೀರ್ಪುಗಾರರ ಅಧ್ಯಕ್ಷ ಪೋಲ್ಫ್‍ಗ್ಯಾಂಗ್ ಜೋ ಹ್ಯಾಷರ್ಟ್ ಅವರಿಂದ ಪ್ರಶಸ್ತಿಯನ್ನು ಪಡೆದರು.
'ಕೇರ¼ಕ್ಕೆ ಜೊತೆಗೆ ಬನ್ನಿ' ಅಭಿಯಾನವು ಪ್ರವಾಸಿಗರನ್ನು ನಗರ ಜೀವನದ ಗದ್ದಲದಿಂದ ಪಾರು ಮಾಡಿ ಕೇರಳದ ಶಾಂತಿಯುತ ಮತ್ತು ಸುಂದರ ಪ್ರಕೃತಿಯನ್ನು ಆನಂದಿಸಲು ಸ್ವಾಗತಿಸುತ್ತದೆ. ಮುದ್ರಣ, ಡಿಜಿಟಲ್, ರೇಡಿಯೋ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಸಂಯೋಜಿಸಿದ ಈ ಅಭಿಯಾನವು, ಕುಟುಂಬ ಪ್ರಯಾಣಕ್ಕೆ ಕೇರಳವನ್ನು ನೆಚ್ಚಿನ ತಾಣವಾಗಿ ಯಶಸ್ವಿಯಾಗಿ ಎತ್ತಿ ತೋರಿಸಿತು.
'ಯೇ ದುರಿಯನ್' ಮತ್ತು 'ಸಾಥ್ ಸಾಥ್' ನಂತಹ ಹೃದಯಸ್ಪರ್ಶಿ ವೀಡಿಯೊಗಳು ಮತ್ತು ಕೇರಳದ ವೈವಿಧ್ಯತೆ ಮತ್ತು ಅನನ್ಯತೆಯನ್ನು ಪ್ರದರ್ಶಿಸುವ ಜಾಹೀರಾತುಗಳಿಂದ ಕೇರಳವು 2023 ರಲ್ಲಿ ದೇಶೀಯ ಪ್ರವಾಸಿಗರ ಆಗಮನದಲ್ಲಿ ಸಾರ್ವಕಾಲಿಕ ದಾಖಲೆಯನ್ನು ಸ್ಥಾಪಿಸಿತು.
ಈ ಪ್ರತಿಷ್ಠಿತ ಪ್ರಶಸ್ತಿಗಳು ಅಂತರರಾಷ್ಟ್ರೀಯ ಮಟ್ಟದ ಮಾರುಕಟ್ಟೆ ಅಭಿಯಾನಗಳನ್ನು ನಿರಂತರವಾಗಿ ನಡೆಸುವಲ್ಲಿ ಕೇರಳ ಪ್ರವಾಸೋದ್ಯಮದ ಪ್ರಯತ್ನಗಳಿಗೆ ದೊರೆತ ಮನ್ನಣೆಯಾಗಿದೆ ಎಂದು ಪ್ರವಾಸೋದ್ಯಮ ಸಚಿವ ಪಿ. ಎ. ಮುಹಮ್ಮದ್ ರಿಯಾಜ್ ಹೇಳಿದರು. 'ಕೇರಳಕ್ಕೆ ಜೊತೆಗೆ ಬನ್ನಿ' ಅಭಿಯಾನವು ಕೇರಳಕ್ಕೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಲು ಸಹಾಯ ಮಾಡಲಿದೆ.
'ಶುಭಮಾಂಗಲ್ಯಂ-ಕೇರಳದಲ್ಲಿ ವಿವಾಹಗಳು' ಎಂಬ ವೀಡಿಯೊ ಕೇರಳದ ಸೌಂದರ್ಯವನ್ನು ಜಗತ್ತಿಗೆ ಪ್ರದರ್ಶಿಸುವಲ್ಲಿ ಮತ್ತು ಕೇರಳವನ್ನು ಒಂದು ಉತ್ತಮ ವಿವಾಹ ತಾಣವಾಗಿ ಪ್ರಸ್ತುತಪಡಿಸುವಲ್ಲಿ ಬಹಳ ಉಪಯುಕ್ತವಾಗಿದೆ ಎಂದು ಸಚಿವರು ಗಮನಸೆಳೆದರು.
'ಶುಭಮಾಂಗಲ್ಯಂ-ಕೇರಳದಲ್ಲಿ ಮದುವೆಗಳು' ಎಂಬ ವಿಡಿಯೋ ಹಾಡು ಕೇರಳದ ಸೌಂದರ್ಯವನ್ನು ಪ್ರದರ್ಶಿಸುತ್ತದೆ, ಇದು ವಿಶ್ವದ ಅತ್ಯಂತ ಆಕರ್ಷಕ ವಿವಾಹ ತಾಣಗಳಲ್ಲಿ ಒಂದಾಗಿ ಗಮನ ಸೆಳೆದಿದೆ. ಈ ವೀಡಿಯೊದಲ್ಲಿ ಮಲಯಾಳಿಯೇತರ ದಂಪತಿಗಳು ಕೇರಳದಲ್ಲಿ ತಮ್ಮ ಮದುವೆಯನ್ನು ಆಚರಿಸುತ್ತಿರುವುದನ್ನು ಚಿತ್ರಿಸಲಾಗಿದೆ. ಮೂರುವರೆ ನಿಮಿಷಗಳ ಈ ಹಾಡನ್ನು ಇಂಗ್ಲಿಷ್, ಹಿಂದಿ ಮತ್ತು ಮಲಯಾಳಂ ಸಾಹಿತ್ಯದ ಮಿಶ್ರಣದಿಂದ ರಚಿಸಲಾಗಿದೆ.
ಆಲಪ್ಪುಳ ಹಿನ್ನೀರು, ವಾಗ್ಮಣ್ ಮತ್ತು ಮರಾರಿ ಬೀಚ್‍ನಲ್ಲಿ ಚಿತ್ರೀಕರಿಸಲಾದ ಈ ವೀಡಿಯೊ, ಫೇಸ್‍ಬುಕ್, ಇನ್‍ಸ್ಟಾಗ್ರಾಮ್ ಮತ್ತು ಟ್ವಿಟರ್‍ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿತು. ಟ್ರಾವೆಲ್ ಪ್ಲಸ್ ಲೀಷರ್ ಇಂಡಿಯಾ ಮತ್ತು ಸೌತ್ ಏಷ್ಯಾ ನಿಯತಕಾಲಿಕೆಯು ಕೇರಳವನ್ನು ಅತ್ಯುತ್ತಮ ವಿವಾಹ ತಾಣವೆಂದು ಆಯ್ಕೆ ಮಾಡಿದೆ.






