HEALTH TIPS

ಜಿಲ್ಲಾ ಮಟ್ಟದ ಚುನಾವಣಾ ಗ್ರಾಮ ಸಭೆ-ಜಿಲ್ಲಾಧಿಕಾರಿಯಿಂದ ಉದ್ಘಾಟನೆ

ಕಾಸರಗೋಡು : ಜಿಲ್ಲೆಯ 983 ಮತಗಟ್ಟೆಗಳಲ್ಲಿ ಚುನಾವಣಾ ಗ್ರಾಮ ಸಭೆ ನಡೆಯಿತು. ಗ್ರಾಮ ಸಭೆಗಳಿಗೆ ಆಗಮಿಸಿದ್ದ ರಾಜಕೀಯ ಪಕ್ಷದ ಏಜೆಂಟರು ಮತ್ತು ಮತದಾರರ ಮುಂದೆ ಬೂತ್ ಮಟ್ಟದ ಅಧಿಕಾರಿ ಮತದಾರರ ಪಟ್ಟಿಯನ್ನು ಓದಿಹೇಳಲಾಯಿತು. ಈ ಸಂದರ್ಭ ಮತದಾರರ ಪಟ್ಟಿಯಲ್ಲಿ ಅನರ್ಹರ ಹೆಸರು ಸೇರ್ಪಡೆಗೊಂಡಿರುವ ಬಗ್ಗೆ ಪರಾಮರ್ಶೆ ನಡೆಸಿ,  ಅಂತಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.  2026ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ  ಪರಿಷ್ಕøತ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುವುದು.ಚುನಾವಣಾ ಗ್ರಾಮ ಸಭೆ 2.0 ರ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಕಾಸರಗೋಡು ಕ್ಷೇತ್ರದ ಡಯಟ್ ಮಾಯಿಪ್ಪಾಡಿಯಲ್ಲಿ ಕಾರ್ಯನಿರ್ವಹಿಸುವ ಬೂತ್ ಸಂಖ್ಯೆ 18 ರಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ. ಇಂಬಾಶೇಖರ್ ನೆರವೇರಿಸಿದರು.  


ಚುನಾವಣಾ ಉಪಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಪಿ. ಅಖಿಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಬಿ. ಎಲ್. ಓ, ಸಿ. ಸಿಂಧು ಮತದಾರರ ಪಟ್ಟಿಯನ್ನು ಓದಿ ಹೇಳಿದರು. 

ಚುನಾವಣಾ ಗ್ರಾಮ ಸಭೆಯಲ್ಲಿ 5563 ಸಾವನ್ನಪ್ಪಿರುವ ಮತದಾರರನ್ನು ಗುರುತಿಸಲು ಸಾಧ್ಯವಾಗಿತ್ತು. 2324 ಬೂತ್ ಮಟ್ಟದ ಏಜೆಂಟರು ಮತ್ತು 2724 ಮತದಾರರು ಸಭೆಯಲ್ಲಿ ಭಾಗವಹಿಸಿದ್ದರು. ಮಂಜೇಶ್ವರ ಕ್ಷೇತ್ರದಲ್ಲಿ ನಡೆದ ಗ್ರಾಮ ಸಭೆಯಲ್ಲಿ 423 ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತ್ತು 384 ಸಾವ9ಜನಿಕರು ಭಾಗವಹಿಸಿದ್ದರು. ಇಲ್ಲಿ ಒಟ್ಟು 991 ಮೃತ ವ್ಯಕ್ತಿಗಳ ಹೆಸರುಗಳನ್ನು ಪತ್ತೆ ಹಚ್ಚಲಾಗಿದೆ. ಕಾಸರಗೋಡು ಕ್ಷೇತ್ರದಲ್ಲಿ ನಡೆದ ಚುನಾವಣಾ ಗ್ರಾಮಸಭೆಯಲ್ಲಿ 416 ರಾಜಕೀಯ ಪಕ್ಷ ಪ್ರತಿನಿಧಿಗಳು ಮತ್ತು 371 ಮಂದಿ ಭಾಗವಹಿಸಿದ್ದರು. ಇಲ್ಲಿ ಒಟ್ಟು 1161 ಮೃತ ವ್ಯಕ್ತಿಗಳ ಹೆಸರುಗಳು ಪತ್ತೆಯಾಗಿವೆ. ಉದುಮ ಕ್ಷೇತ್ರದಲ್ಲಿ ನಡೆದ ಚುನಾವಣಾ ಗ್ರಾಮ ಸಭೆಯಲ್ಲಿ 508 ರಾಜಕೀಯ ಪಕ್ಷ ಪ್ರತಿನಿಧಿಗಳು ಮತ್ತು 771 ಮತದಾರರು ಭಾಗವಹಿಸಿದ್ದರು. ಇಲ್ಲಿಂದ ಒಟ್ಟು 1291 ಮೃತ ವ್ಯಕ್ತಿಗಳ ಹೆಸರು ಪತ್ತೆಹಚ್ಚಲಾಗಿದೆ. 

ಕಾಞಂಗಾಡ್ ಕ್ಷೇತ್ರದಲ್ಲಿ ನಡೆದ ಚುನಾವಣಾ ಗ್ರಾಮಸಭೆಯಲ್ಲಿ 457 ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತ್ತು 398 ಮತದಾರರು ಭಾಗವಹಿಸಿದ್ದರು. ಇಲ್ಲಿಂದ ಒಟ್ಟು 1135 ಮೃತ ವ್ಯಕ್ತಿಗಳ ಹೆಸರು ಪತ್ತೆಮಾಡಲಾಯಿತು.

ತ್ರಿಕರಿಪುರ ಕ್ಷೇತ್ರದಲ್ಲಿ ನಡೆದ ಚುನಾವಣಾ ಗ್ರಾಮ ಸಭೆಯಲ್ಲಿ 520 ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತ್ತು 800 ಮಂದಿ ಗ್ರಾಮ ಸಭೆಯಲ್ಲಿ ಭಾಗವಹಿಸಿದ್ದರು ಇಲ್ಲಿ ಒಟ್ಟು 985 ಮೃತ ವ್ಯಕ್ತಿಗಳ ಹೆಸರುಗಳು ಕಂಡುಬಂದಿದೆ. ಮೃತಪಟ್ಟ ಮತ್ತು ಸ್ಥಳಾಂತರಗೊಂಡ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಕ್ರಮಗಳನ್ನು ಮುಂದಿನ ದಿನಗಳಲ್ಲಿ ಕೈಗೊಂಡು ಪರಿಷ್ಕøತ ಪಟ್ಟಿಯನ್ನು ನಡೆಸಲು ತೀರ್ಮಾನಿಸಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries