ಕಾಸರಗೋಡು: ಮುಕ್ತ ಮಾಧ್ಯಮ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಕಟ್ಟುನಿಟ್ಟಿನ ನಿಗಾವಹಿಸುವುದರ ಜೊತೆಗೆ ನಕಲಿ ಮಾಧ್ಯಮದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೋಲೀಸ್ ಮಾಧ್ಯಮ ಸಮನ್ವಯ ಸಮಿತಿಯ ಜಿಲ್ಲಾ ಮಟ್ಟದ ಸಭೆಯಲ್ಲಿ ತೀಮನಿಸಲಾಯಿತು.
ಪತ್ರಿಕಾ ಮತ್ತು ದೃಶ್ಯ ಮಾಧ್ಯಮಗಳ ಜೊತೆ ಸಂಬಂಧ ಹೊಂದಿರದೆ, ಸುದ್ದಿ ಪ್ರಚಾರದ ಹೆಸರಲ್ಲಿ ಜನರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರು ಲಭಿಸಿದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ವಾಹನಗಳ ಮೇಲೆ ಅನಧಿಕೃತವಾಗಿ ಮಾಧ್ಯಮ ಸ್ಟಿಕ್ಕರ್‍ಗಳನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಬಾಲಕೃಷ್ಣನ್ ನಾಯರ್ ತಿಳಿಸಿದರು. ಜಿಲ್ಲೆಯಲ್ಲಿ ಮಾಧ್ಯಮ ಮತ್ತು ಪೆÇಲೀಸರ ನಡುವೆ ಉತ್ತಮ ಸೌಹಾರ್ದ ವಾತಾವರಣವಿರುವುದಾಗಿ ಸಭೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ವಾಹನಗಳ ಮೇಲೆ ಅನಧಿಕೃತವಾಗಿ ಪ್ರೆಸ್ ಸ್ಟಿಕ್ಕರ್ ಅಳವಡಿಸದಿರುವಂತೆಯೂ ಸೂಚಿಸಲಾಯಿತು. ಮಾಧ್ಯಮ ಕಾರ್ಯಕರ್ತರೆಂಬ ನೆಪದಲ್ಲಿ ಸಾರ್ವಜನಿಕರಿಂದ ಹಣ ಪಡೆಯುವ ಕೆಲವರ ಪ್ರವೃತ್ತಿ ಬಗ್ಗೆ ಸ್ವತಃ ಮಾಧ್ಯಮ ಸಂಸ್ಥೆಗಳೇ ದೂರು ನೀಡಿದ್ದು, ಈ ರೀತಿ ಹಣ ವಸೂಲಿಮಾಡುವವರ ವಿರುದ್ಧ ನೇರವಾಗಿ ಪೋಲೀಸರಿಗೆ ದೂರು ನೀಡಬೇಕು ಮತ್ತು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ)ಪಿ. ಅಖಿಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನ್ ವಿಷಯ ಮಂಡಿಸಿದರು. ತಾಲೂಕು ಗ್ರಂಥಾಲಯ ಪರಿಷತ್ ಕಾರ್ಯದರ್ಶಿ ಪಿ.ದಾಮೋದರನ್, ವಕೀಲ ಕೆ. ಕುಮಾರನ್ ನಾಯರ್, ಪ್ರೆಸ್ ಕ್ಲಬ್ ಅಧ್ಯಕ್ಷ ಸಿಜು ಕಣ್ಣನ್, ಪ್ರೆಸ್ ಕ್ಲಬ್ ಕಾರ್ಯದರ್ಶಿ ಪ್ರದೀಪ್ ಜಿ.ಎನ್ ಉಪಸ್ಥಿತರಿದ್ದರು.





