ಕಾಸರಗೋಡು: ಕರ್ಷಕಶ್ರೀ ಹಾಲು ಒಕ್ಕೂಟ ವತಿಯಿಂದ ಇಫ್ತಾರ್ ಸಂಗಮ ಮಾ.23ರಂದು ಸಂಜೆ 4ಕ್ಕೆ ಎಡನೀರು ಸನಿಹದ ಎದುರ್ತೋಡು ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಜರುಗಲಿದೆ ಎಂದು ಹಾಲು ಒಕ್ಕೂಟ ಅದ್ಯಕ್ಷ ಇ. ಅಬ್ದುಲ್ಲ ಕುಞÂ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾಸರಗೋಡಿನ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಫಾದರ್ ಜಾರ್ಜ್ ವರ್ಗೀಸ್, ಚಿನ್ಮಯ ಮಿಷನ್ನಿನ ಸ್ವಾಮಿ ವಿವಿಕ್ತಾನಂದ ಸರಸ್ವತೀ, ಕಾಸರಗೋಡು ಹೆಚ್ಚುವರಿ ಎಸ್.ಪಿ. ಬಾಲಕೃಷ್ಣನ್ ನಾಯರ್ ಪಿ, ತಳಂಗರೆ ದೊಡ್ಡ ಜಮಾಅತ್ ಮಸೀದಿ ಖತೀಬ್ ಅಬ್ದುಲ್ ಮಜೀದ್ ಬಾಖವಿ ಅಲ್ಲದೆ ಸಾಮಾಜಿಕ, ಸಾಂಸ್ಕøತಿಕ, ಧಾರ್ಮಿಕ, ರಾಜಕೀಯ ಮುಖಂಡರು ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಇಬ್ರಾಹಿಂ ಮಸೂದ್, ಮೂಸಾ ಇ ಭಾಗವಹಿಸಿದ್ದರು.




