ಕಾಸರಗೋಡು : ಹೊಸದುರ್ಗ ಮತ್ತು ಕಾಸರಗೋಡಿನ ನ್ಯಾಯಾಲಯಗಳ ಮೂಲಸೌಕರ್ಯ ಹೆಚ್ಚಿಸಬೇಕು ಹಾಗೂ ನೂತನ ನ್ಯಾಯಾಲಯ ಕಟ್ಟಡಗಳ ನಿರ್ಮಾಣವನ್ನು ತಕ್ಷಣ ಆರಂಭಿಸಬೇಕು ಎಂದು ಭಾರತೀಯ ವಕೀಲರ ಪರಿಷತ್ತಿನ ಜಿಲ್ಲಾ ಸಮ್ಮೇಳನ ಆಗ್ರಹಿಸಿದೆ.
ವಕೀಲರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ವಕೀಲ ಆರ್ ರಾಜೇಂದ್ರನ್ ಸಮ್ಮೇಳನ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ವಕೀಲ ಎ.ಸಿ ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ಬಿ.ರವೀಂದ್ರನ್, ರಾಜ್ಯ ಸಮಿತಿ ಸದಸ್ಯ ಕರುಣಾಕರನ್ ನಂಬಿಯಾರ್ ಉಪಸ್ಥಿತರಿದ್ದರು. ವಕೀಲ ಪಿ.ಮುರಳೀಧರನ್ ಸ್ವಾಗತಿಸಿದರು. ವಕೀಲೆ ಕೆ.ಎಂ. ಬೀನಾ ವಂದಿಸಿದರು. ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಎ.ಸಿ ಅಶೋಕ್ ಕುಮಾರ್ ಅಧ್ಯಕ್ಷ, ಅನಂತರಾಮ ಪಿ, ಅನಿಲ್ ಕೆ. ಜಿ, ಕುಸುಮಾ. ಎಂ ಉಪಾಧ್ಯಕ್ಷರು, ನವೀನ್‍ರಾಜ್ ಕೆ.ಜೆ ಪ್ರಧಾನ ಕಾರ್ಯದರ್ಶಿ, ಸೂರ್ಯನಾರಾಯಣ.ಎನ್, ಪ್ರಜಿತ್ ಎಸ್.ಕೆ., ಅಕ್ಷ ಜತೆ ಕಾರ್ಯದರ್ಶಿಗಳು ಹಾಗೂ ಕೋಶಾಧಿಕಾರಿಯಾಗಿ ಹರ್ಷಿತಾ ಅವರನ್ನು ಆಯ್ಕೆ ಮಾಡಲಾಯಿತು.




