ಕಾಸರಗೋಡು: ರಾಷ್ಟ್ರೀಯ ವಿಜ್ಞಾನ ದಿನವನ್ನು 'ವಿಜ್ಞಾನದಲ್ಲಿ ಜಾಗತಿಕ ನಾಯಕತ್ವಕ್ಕಾಗಿ ಭಾರತೀಯ ಯುವಕರನ್ನು ಸಬಲೀಕರಣಗೊಳಿಸುವುದು ಮತ್ತು ವಿಕಸಿತ ಭಾರತಕ್ಕಾಗಿ ನಾವೀನ್ಯತೆ' ಎಂಬ ವಿಷಯದೊಂದಿಗೆ ಐಸಿಎಅರ್-ಸಿಪಿಸಿಅರ್‍ಐ ಕಾಸರಗೋಡಿನಲ್ಲಿ ಆಚರಿಸಲಾಯಿತು.
ಸಿಪಿಸಿಆರ್‍ಐ ನಿರ್ದೇಶಕ ಡಾ.ಕೆ.ಬಿ.ಹೆಬ್ಬಾರ್ ಅದ್ಯಕ್ಷತೆ ವಹಿಸಿದ್ದರು. ಕಾಸರಗೋಡು ಎಳೇರಿತಟ್ಟು ಇ.ಕೆ ನಾಯನಾರ್ ಸ್ಮಾರಕ ಸರ್ಕಾರಿ ಕಾಲೇಜು ನಿವೃತ್ತ ಪ್ರಾಂಶುಪಾಲ ಪೆÇ್ರ.ಎಂ.ಗೋಪಾಲನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭ ರಸಪ್ರಶ್ನೆಯಲ್ಲಿ ಭಾಗವಹಿಸಿ ವಿಜೇತರದ ಕಾಲೇಜಿನ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳು ಬಹುಮಾನ ವಿತರಿಸಿದರು.ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಪೆÇನ್ನುಸಾಮಿ ಸ್ವಾಗತಿಸಿ. ಡಾ.ಕೆ.ಪಿ.ಚಂದ್ರನ್ ವಂದಿಸಿದರು.





