ಕಾಸರಗೋಡು: ಪಶುಸಂಗೋಪನಾ ಇಲಾಖೆಯು ಜಿಲ್ಲೆಯ ಕಾಸರಗೋಡು ಮತ್ತು ಕಾಞಂಗಾಡು ಬ್ಲಾಕ್‍ಗಳಲ್ಲಿ ಜಾರಿಗೊಳಿಸಿದ ಮೊಬೈಲ್ ವೆಟರ್ನರಿ ಘಟಕದ ಕಾರ್ಯಾಚರಣೆಗಾಗಿ ವೆಟರ್ನರಿ ಸರ್ಜನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಸಲಾಗುವುದು. ವೆಟರ್ನರಿ ವಿಜ್ಞಾನದಲ್ಲಿ ಪದವಿ ಮತ್ತು ಕೇರಳ ವೆಟರ್ನರಿ ಕೌನ್ಸಿಲ್ ನೋಂದಾವಣೆ ಅರ್ಹತೆಯಾಗಿದೆ. ಆಸಕ್ತರು ಮಾರ್ಚ್ 4ರಂದು ಬೆಳಗ್ಗೆ 11ಕ್ಕೆ ಕಾಸರಗೋಡು ಜಿಲ್ಲಾ ಪಶು ಸಂರಕ್ಷಣಾ ಕಛೇರಿಯಲ್ಲಿ ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 224624)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




