ಕಾಸರಗೋಡು: ನಕಲಿ ದಾಖಲೆಗಳೊಂದಿಗೆ ಕಾಞಂಗಾಡಿನಲ್ಲಿ ಬಂಧಿತನಾದ ಬಾಂಗ್ಲಾ ಪ್ರಜೆ ಶಬೀರ್ ಶೇಖ್ ಯಾನೆ ಅತಿಯಾರ್ ರಹಿಮಾನ್‍ನ ಚಲನವಲನಗಳಲ್ಲಿ ನಿಗೂಢತೆ ಅಡಗಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ. ಈತ ಪ್ರತಿದಿನ ಬಾಂಗ್ಲಾ ದೇಶಕ್ಕೆ ಕರೆ ಮಾಡುತ್ತಿದ್ದನು, ಅಲ್ಲದೆ ಲಕ್ಷಾಂತರ ರೂ.ಹಣವನ್ನು ಈತ ಉರಿಗೆ ರವಾನಿಸಿರುವುದು ತನಿಖೆಯಿಂದ ತಿಳಿದು ಬಂದಿದೆ. ಪ್ರಸಕ್ತ ನ್ಯಾಯಾಂಗ ಬಂಧನದಲ್ಲಿರುವ ಈತನನ್ನು ಕಸ್ಟಡಿಗೆ ಪಡೆಯಲು ಪೆÇಲೀಸರು ನಿರ್ದರಿಸಿದ್ದಾರೆ.
ಕಾಞಂಗಾಡ್ ಬಲ್ಲ, ಆವಿ ಫೂಡಂಕಲ್ಲ್ ಬಾಡಿಗೆ ಕ್ವಾಟರ್ಸಿನಿಂದ ಶಬೀರ್ ಶೇಖ್ ಯಾನೆ ಅತಿಯಾರ್ ರಹಿಮಾನ್(22) ನನ್ನು ಹೊಸದುರ್ಗ ಪೆÇಲೀಸರ ಸಹಾಯದೊಂದಿಗೆ ಎಟಿಎಸ್ ವಶಕ್ಕೆ ಪಡೆದಿತ್ತು. ಈ ಹಿಂದೆ ಕೊಚ್ಚಿ ಸಹಿತ ರಾಜ್ಯದ ವಿವಿದೆಡೆ ಬಂಧಿತರಾದ ಬಾಂಗ್ಲಾದೇಶದ ಪ್ರಜೆಗಳ ಜತೆ ಈತನಿಗೆ ನಿಕಟ ಸಂಪರ್ಕ ಇದೆಯೆಂದೂ ತಿಳಿದು ಬಂದಿದೆ. ಸಾರಣೆ ಕೆಲಸ ಮಾಡುತ್ತಿದ್ದ ಅತಿಯಾರ್ ರಹಿಮಾನ್ ದೊಡ್ಡ ಮೊತ್ತ ಹಣವನ್ನು ವಿದೇಶಕ್ಕೆ ಕಳುಹಿಸಿದ್ದನು. ಈ ಹಣ ಈತನಿಗೆ ಎಲ್ಲಿಂದ ಲಭಿಸಿತು ಎಂಬ ಬಗ್ಗೆ ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ.




