ಕಾಸರಗೋಡು: ಇತಿಹಾಸ ಪ್ರಸಿದ್ಧ ಪಾಲಕುನ್ನು ಶ್ರೀ ಭಗವತೀ ಕ್ಷೇತ್ರದ ಭರಣೀಮಹೋತ್ಸವ ಅಂಗವಾಗಿ ಸುಡುಮದ್ದು ಪ್ರದರ್ಶನ ನಡೆಸಿದವರ ವಿರುದ್ಧ ಬೇಕಲ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಉತ್ಸವ ವೀಕ್ಷಣೆಗೆ ಆಗಮಿಸಿದ ಭಕ್ತಾದಿಗಳಿಗೆ ಅಪಾಯ ಉಂಟುಮಾಡುವ ರೀತಿಯಲ್ಲಿ ಯಾವುದೇ ಮುಂಜಾಗ್ರತೆ ವಹಿಸದೆ ಸುಡುಮದ್ದುಸ್ಪೋಟಿಸಿರುವುದಾಗಿ ಆರೋಪಿಸಿ ಈ ಕೇಸು ದಾಖಲಿಸಲಾಗಿದೆ.
ದೇವಸ್ಥಾನ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಂದ್ರನಾಥ್, ಅಧ್ಯಕ್ಷ, ವಕೀಲ ಕೆ. ಬಾಲಕೃಷ್ಣನ್, ಸುಡುಮದ್ದು ಸ್ಪೋಟ ನಡೆಸಿದ ನೀಲೇಶ್ವರದ ಪಿ.ವಿ ದಾಮೋದರನ್ ಸೇರಿದಂತೆ ಎಂಟು ಮಂದಿ ವಿರುದ್ಧ ಕೇಸು.




