ಕಾಸರಗೋಡು: ಜಿಲ್ಲಾ ವೈದ್ಯಕೀಯ ಕಚೇರಿ (ಆರೋಗ್ಯ) ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್‍ನ ಜಂಟಿ ಆಶ್ರಯದಲ್ಲಿ ವಿವಿಧ ಆರೋಗ್ಯ ವಿಷಯಗಳ ಕುರಿತು ಸೋಮವಾರ ಮಾಧ್ಯಮ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಾಞಂಗಾಡ್ ರಾಜ್ ರೆಸಿಡೆನ್ಸಿಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ. ಎ. ವಿ. ರಾಮದಾಸ್ ಇದನ್ನು ಉದ್ಘಾಟಿಸಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಸಂತೋμï ಬಿ ಅಧ್ಯಕ್ಷತೆ ವಹಿಸಿದ್ದರು. ಕೇರಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಾರಿಗೆ ತಂದಿರುವ ಕ್ಯಾನ್ಸರ್ ತಡೆಗಟ್ಟುವಿಕೆ ಸಾರ್ವಜನಿಕ ಅಭಿಯಾನದ ಭಾಗವಾಗಿ, ಗರ್ಭಕಂಠದ ಕ್ಯಾನ್ಸರ್ ಮತ್ತು ತಡೆಗಟ್ಟುವಿಕೆ ಎಂಬ ವಿಷಯದ ಕುರಿತು ನಾರ್ಕಿಲಕ್ಕಾಡ್ ಕುಟುಂಬ ಆರೋಗ್ಯ ಕೇಂದ್ರದ ಸ್ತ್ರೀರೋಗ ತಜ್ಞ ಡಾ. ಅಲೋಕ್ ಪಿ. ರಾಜ್ ಮಾತನಾಡಿದರು. ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ. ರಂಜಿತ್ ಪಿ. ಬಿಸಿಲಿನ ಹೊಡೆತ ಮತ್ತು ಕುಷ್ಠರೋಗ ನಿರ್ಮೂಲನೆ ಕುರಿತು ಮಾತನಾಡಿದರು. ಸಂತೋಷ್ ಕೆ. ಯೂಮ್ ತರಗತಿಗಳನ್ನು ನಿರ್ವಹಿಸಿದರು. ಜಿಲ್ಲಾ ಮಾಹಿತಿ ಅಧಿಕಾರಿ ಮಧುಸೂಧನನ್ ಎಂ ಮತ್ತು ತಾಂತ್ರಿಕ ಸಹಾಯಕ ಚಂದ್ರನ್ ಎಂ ಮಾತನಾಡಿದರು. ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್ ಸ್ವಾಗತಿಸಿ, ರಾಷ್ಟ್ರೀಯ ಆರೋಗ್ಯ ಮಿಷನ್ ಸಲಹೆಗಾರ (ದಾಖಲೆ ಮತ್ತು ಸಂವಹನ) ಕಮಲ್ ಕೆ ಜೋಸ್ ವಂದಿಸಿದರು. ಆರೋಗ್ಯ ಇಲಾಖೆ ಜಾರಿಗೆ ತಂದಿರುವ ವಿವಿಧ ಸಾರ್ವಜನಿಕ ಪ್ರಯೋಜನ ಅಭಿಯಾನಗಳೊಂದಿಗೆ ಗರಿಷ್ಠ ಸಂಖ್ಯೆಯ ಜನರನ್ನು ತಲುಪಲು ಪತ್ರಕರ್ತರ ಸಹಕಾರದೊಂದಿಗೆ ಸಾಮೂಹಿಕ ಪ್ರಯತ್ನಗಳನ್ನು ಬಲಪಡಿಸಲು ಆರೋಗ್ಯ ಇಲಾಖೆ ಮತ್ತು ವಿವಿಧ ಇಲಾಖೆಗಳು ಒಟ್ಟಾಗಿ ಕೆಲಸ ಮಾಡುತ್ತವೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ಎ. ವಿ. ರಾಮದಾಸ್ ಮಾಹಿತಿ ನೀಡಿದರು.




.jpeg)
