ಉಪ್ಪಳ: ಕಣಜದ ಹುಳು ದಾಳಿ ನಡೆಸಿದ ಪರಿಣಾಮ ಮಂಗಲ್ಪಾಡಿ ಪುಳಿಕುತ್ತಿ ಸನಿಹದ ಅಗರ್ತಿಮೂಲೆ ನಿವಾಸಿ ರಾಧಾಕೃಷ್ಣ(62) ಮೃತಪಟ್ಟಿದ್ದಾರೆ. ಮನೆಯಿಂದ ನಡೆದುಹೋಗುತ್ತಿದ್ದ ಇವರಿಗೆ ಸೋಂಕಾಲು ಪ್ರದೇಶದಲ್ಲಿ ಸೋಮವಾರ ಕಣಜದ ಹುಳುಗಳು ದಾಳಿ ನಡೆಸಿದ್ದು, ಸ್ಥಳೀಯರು ಹಾಗೂ ಇವರ ಪುತ್ರ ಸೇರಿ ಮಂಗಲ್ಪಾಡಿ ಸರ್ಕಾರಿ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ, ಮನೆಗೆ ಕರೆತಂದಿದ್ದರು. ಮನೆಯಲ್ಲಿ ವಿಶ್ರಂತಿಯಲ್ಲಿದ್ದ ಇವರಿಗೆ ಮಂಗಳವಾರ ಮಧ್ಯಾಹ್ನ ಮತ್ತೆ ಅಸೌಖ್ಯ ಕಾಣಿಸಿಕೊಂಡಿದ್ದು, ಅಲ್ಪ ಹೊತ್ತಿನಲ್ಲೇ ಮೃತಪಟ್ಟಿದ್ದಾರೆ.




