ಕಾಸರಗೋಡು: ಪರಿಶಿಷ್ಟ ವರ್ಗ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಪರವನಡ್ಕ ಸರ್ಕಾರಿ ಮಾಡೆಲ್ ರೆಸಿಡೆನ್ಶಿಯಲ್ ಶಾಲೆಗೆ 2025-26ನೇ ಶೈಕ್ಷಣಿಕ ವರ್ಷದ ಐದನೇ ತರಗತಿಗಿರುವ ವಿದ್ಯಾರ್ಥಿಗಳ ದಾಖಲತಿಗಿರುವ ಪರೀಕ್ಷೆಯು ಮಾರ್ಚ್ 8ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 12 ಯವರೆಗೆ ಪರವನಡುಕ್ಕ ಮಾಡೆಲ್ ರೆಸಿಡೆನ್ಶಿಯಲ್ ಶಾಲೆಯಲ್ಲಿ ನಡೆಯಲಿದೆ.
ಪ್ರಸಕ್ತ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಹಾಲ್ ಟಿಕೆಟ್ ಸಹಿತ ಪರೀಕ್ಷೆಯ ಒಂದು ಗಂಟೆಯ ಮೊದಲು ಕೇಂದ್ರಕ್ಕೆ ಹಾಜರಾಗಬೇಕು. ನಿಗದಿತ ಸಮಯದೊಳಗೆ ಹಾಲ್ ಟಿಕೆಟ್ ಪಡೆಯದವರು ಮಾರ್ಚ್ 7 ರ ಮೊದಲು ಕಚೇರಿಯನ್ನು ನೇರವಾಗಿ ಅಥವಾ ದೂರವಾಣಿ ಸಂಖ್ಯೆ(04994 255466) ಮೂಲಕ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




