ಕಾಸರಗೋಡು : ಶ್ರೀ ಬಿಕ್ಷು ಲಕ್ಷಣಾನಂದ ಸ್ವಾಮೀಜಿ ಜನ್ಮ ದಿನೋತ್ಸವ ಅಂಗವಾಗಿ ಮೇ 18ರಂದು ದಿನಪೂರ್ತಿ ನಡೆಯಲಿರುವ ಬೃಹತ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಕಾಸರಗೋಡು ನಾಗರಕಟ್ಟೆ ಶ್ರೀ ಶಾರದಾಂಬಾ ಭಜನಾಶ್ರಮದಲ್ಲಿ ನಡೆಯಿತು.
ಶ್ರೀ ಭಿಕ್ಷು ಸ್ವಾಮೀಜಿ ಸೇವಾ ಸಮಾಜ ಪ್ರದಾನ ಕಾರ್ಯದರ್ಶಿ ದಿನೇಶ್ ನಾಗರಕಟ್ಟೆ ಅವರು ವಿಶ್ವ ರಾಮಕ್ಷತ್ರಿಯ ಮಹಾಸಂಘ ಉಪ ಸಂಪಾದಕರಾದ ಡಾ. ವಾಮನ್ ರಾವ್ ಬೇಕಲ್ ಅವರಿಗೆ ಆಮಂತ್ರಣ ಪತ್ರಿಕೆ ಹಸ್ತಾಂತರಿಸುವ ಮೂಲಕ ಬಿಡುಗಡೆ ಗೊಳಿಸಿದರು. ಸಮಾರಂಭದಲ್ಲಿ ವಿಶ್ವನಾಥ ಮಾಸ್ಟರ್ ಕೋಟೆಕಣಿ, ಪಾಂಡುರಂಗ ವಿದ್ಯಾನಗರ, ಪಾಂಡುರಂಗ ಸಿರಿಬಾಗಿಲು, ದಿವಾಕರ ಮೀಪುಗುರಿ, ಪ್ರದೀಪ್ ನಾಯ್ಕ್ ನಾಗರಕಟ್ಟೆ, ಮುರಳಿ ಪಾರೆಕಟ್ಟೆ, ಮೋಹನ್‍ರಾಜ್ ಕೂಡ್ಲು, ಲಲಿತಾ ಕೇಶವ್, ಪ್ರಜ್ವಲ್ ನಾಯ್ಕ್, ನಗರಸಭಾ ಸದಸ್ಯೆ ರಂಜೀತ ಮೋಹನ್ದಾಸ್, ಗೀತಾ ಪುರುಷೋತ್ತಮ್, ಮಣಿ ಸೂರ್ಲು, ವಿನೋದ್ ನಾಗರಕಟ್ಟೆ, ಪುನೀತ್, ಮೋನಿಶ್ ಉಪಸ್ಥಿತರಿದ್ದರು. ದಿನೇಶ್ ನಾಗರಕಟ್ಟೆ ಸ್ವಾಗತಿಸಿದರು. ರಂಜಿತಾ ಮೋಹನ್ ದಾಸ್ ಕಾರ್ಯಕ್ರಮ ನಿರ್ವಹಿಸಿದರು. ಪ್ರದೀಪ್ ನಾಯ್ಕ್ ವಂದಿಸಿದರು,
ಮೇ 18ರಂದು ಬೆಳಿಗ್ಗೆ ಗಣಹೋಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಭಿಕ್ಷು ಸಮಾಜದ ಮಕ್ಕಳಿಗೆ ಪುಸ್ತಕಗಳ ಉಚಿತ ವಿತರಣೆ ನಡೆಯಲಿರುವುದು. ಸಂಜೆ 7ಗಂಟೆಗೆ ಭಜನಾಶ್ರಮ ಸಂಘದಿಂದ ಭಜನೆ, ರಾತ್ರಿ 8ಕ್ಕೆ ಸ್ವಾಮಿಜಿಯವರ ಪಾದ ಪೂಜೆ ನಡೆಯಲಿರುವುದು.





