ಕಾಸರಗೋಡು: ರಾಜ್ಯ ಸರ್ಕಾರದ ನಾಲ್ಕನೇ ವರ್ಷಾಚರಣೆಯ ರಾಜ್ಯಮಟ್ಟದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ವಿವಿಧ ವಿಭಾಗಗಳಿಗೆ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ. ಯುಪಿ-ಹೈಸ್ಕೂಲ್, ಹೈಯರ್ ಸೆಕೆಂಡರಿ- ಕಾಲೇಜು ಮಟ್ಟ, ಸಾರ್ವಜನಿಕ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆಯು ನಡೆಯಲಿದೆ. 'ನನ್ನ ಕೇರಳ: ನಿನ್ನೆ, ಇಂದು, ನಾಳೆ' ವಿಷಯಾಧಾರಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತು ಸಂಸ್ಥೆಯನ್ನು ಠಿಡಿಜಛಿoಟಿಣesಣ@gmಚಿiಟ.ಛಿom ಎಂಬ ಇಮೇಲ್ ಐಡಿಗೆ ಕಳುಹಿಸಿ ಏಪ್ರಿಲ್ 5 ರೊಳಗೆ ನೋಂದಾಯಿಸಿಕೊಳ್ಳಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಣಿ ಸಂಖ್ಯೆ(04994 255145, 9496003201)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಪ್ರಬಂಧ ಸ್ಪರ್ಧೆ:
ರಾಜ್ಯ ಸರಕಾರದ ನಾಲ್ಕನೇ ವರ್ಷಾಚರಣೆಯ ರಾಜ್ಯಮಟ್ಟದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಲಗಿದೆ. 'ಕಾಸರಗೋಡಿನ ಕೊನೆಯ ಒಂಬತ್ತು ವರ್ಷಗಳು' ಎಂಬ ವಿಷಯದ ಕುರಿತು 300 ಪದಗಳನ್ನು ಮೀರದಂತೆ ಪ್ರಬಂಧ ರಚಿಸಬೇಕು. ಆಸಕ್ತ ಅಭ್ಯರ್ಥಿಗಳು ಹೆಸರು, ವಿಳಾಸ, ಫೆÇೀನ್ ಸಂಖ್ಯೆ ಮತ್ತು ಸಂಸ್ಥೆಯನ್ನು ಠಿಡಿಜಛಿoಟಿಣesಣ@gmಚಿiಟ.ಛಿom ಎಂಬ ಇಮೇಲ್ ಐಡಿಗೆ ಮೇಲ್ ಮಾಡಬೇಕು. ಜಿಲ್ಲಾ ಮಾಹಿತಿ ಕಛೇರಿ ಸಿವಿಲ್ ಸ್ಟೇಷನ್ ವಿದ್ಯಾನಗರ ಕಾಸರಗೋಡು 671123 ಎಂಬ ವಿಳಾಸಕ್ಕೆ ಅಂಚೆಯ ಮೂಲಕ ಪ್ರಬಂಧಗಳನ್ನು ಕಳುಹಿಸಬಹುದು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 255145, 9496003201)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




