HEALTH TIPS

ಶ್ರೀದೇವರನ್ನು ನಮ್ಮೊಳಗೆ ಆವಾಹಿಸುವುದೇ ಬ್ರಹ್ಮಕಲಶಗಳ ಸಾಕಾರತೆ-ಸುಬ್ರಹ್ಮಣ್ಯಶ್ರೀಗಳು

ಮಧೂರು : ಎಲ್ಲೆಡೆ ವ್ಯಾಪಿಸಿರುವ ಧೀಶಕ್ತಿಯಾಗಿರುವ ಭಗವಂತನನ್ನು ಆರಾಧಿಸುವ ದೇವಾಲಯಗಳ ಶಕ್ತಿಯನ್ನು ಉದ್ದೀಪನಗೊಳಿಸುವುದರ ಜತೆಗೆ ಶ್ರೀದೇವರನ್ನು ನಮ್ಮೊಳಗೆ ಆವಾಹಿಸುವುದೇ ಬ್ರಹ್ಮಕಲಶಗಳ ಸಾಕಾರತೆ ಎಂದು ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀಥ ಸ್ವಾಮೀಜಿ ತಿಳಿಸಿದರು. ಅವರು ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆಯ ಅಂಗವಾಗಿ ಶುಕ್ರವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಆಶೀವಚನ ನೀಡಿದರು.

ದೇವಾಲಯಗಳ ಜೀಣೋದ್ಧಾರ ಪ್ರಕ್ರಿಯೆಗಳು ಸಮಾಜದ ಎಲ್ಲಾ ವರ್ಗದ ಭಜಕರ ನಿರಂತರ ಪರಿಶ್ರಮದಿಂದ ಅತ್ಯುತ್ತಮವಾಗಿ ಮೂಡಿಬಂದು ಕೃತಾರ್ಥತೆ ಮೂಡಿಸಿದೆ. ಈ ನಿಟ್ಟಿನಲ್ಲಿ ಪ್ರಯತ್ನಿಸಿದ ಪ್ರತಿಯೊಬ್ಬನಿಗೂ ಅನುಗ್ರಹ ಪ್ರಾಪ್ತಿಯಾಗುವುದು. ಇದು ಈ ಪ್ರದೇಶದ ಶ್ರೀಸೇವಕರ ಬದುಕಿನ ಮಹತ್ತರ ಅನುಗ್ರಹ ಕಾಲಘಟ್ಟದ ಪ್ರತೀಕವೆಂದು ಅವರು ತಿಳಿಸಿದರು.


ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಉಪಸ್ಥಿತರಿದ್ದು ಆಶೀವಚನ ನೀಡಿದರು.

ಸಮಾರಂಭದಲ್ಲಿ ನಿವೃತ್ತ ಪ್ರಾಚಾರ್ಯ ಪಂಜ ಭಾಸ್ಕರ ಭಟ್ ಧಾರ್ಮಿಕ ಉಪನ್ಯಾಸ ನೀಡಿ, ಕಿರಿಯ ಸ್ವಯಂಸೇವಕನಿಂದ ತೊಡಗಿ ದಾನ ನೀಡಿದ ಹಿರಿಯ ಸಹೃದಯರವರೆಗೂ ಪ್ರತಿಯೊಬ್ಬನ ಕೊಡುಗೆ ಅಮೂಲ್ಯ ಮತ್ತು ದೈವಪ್ರಿಯವಾದುದು. ದೇವಾಲಯಗಳ ಪುನರುತ್ಥಾನದಿಂದ ಅದರ ಸತ್ಪಲ ಆತ್ಯಂತಿಕವಾಗಿ ನಮ್ಮ ಯಶಸ್ಸಿಗೆ ಕಾರಣವಾಗುತ್ತದೆ ಎಂದರು.

ರಾಜ್ಯ ಪೆÇೀಲೀಸ್ ನಿವೃತ್ತ ಮಹಾನಿರ್ದೇಶಕ ಸೆನ್ ಕುಮಾರ್ ಗೌರವ ಉಪಸ್ಥಿತರಿದ್ದರು.  ಚಲಚಿತ್ರ ನಟ, ನಿರ್ಧೇಶಕ ಶಿವಧ್ವಜ್ ಶೆಟ್ಟಿ, ಉದ್ಯಾವರ ಮಾಡ ಕ್ಷೇತ್ರದ ಮೊಕ್ತೇಸರ ಕಿರಣ್ ಶೆಟ್ಟಿ, ಡಾ.ವೆಂಕಟಗಿರಿ ಕಾಸರಗೋಡು, ಸನತ್ ಸೇನವ ಗುರುಪುರ ಕೈಕಂಬ ಉಪಸ್ಥಿತರಿದ್ದು ಮಾತನಾಡಿದರು.

ಬ್ರಹ್ಮಕಲಶೋತ್ಸವ ಸಾಂಸ್ಕøತಿಕ ಸಮಿತಿ ಸಂಚಾಲಕ ಸತ್ಯನಾರಾಯಣ ತಂತ್ರಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ರಮೇಶ್ ಕೃಷ್ಣ  ಪದ್ಮಾರ್ ನಿರೂಪಿಸಿದರುಬ್ರಹ್ಮಕಲಶೋತ್ಸವ ಸಮಿತಿ ಸದಸ್ಯ ನರಸಿಂಹ ಮಯ್ಯ ತೋಟ ವಂದಿಸಿದರು. .

ಈ ಸಂದರ್ಭ ನಡೆದ ಸಾಂಸ್ಕೃತಿಕ ಕಾಯಕ್ರಮದಲ್ಲಿ ಪ್ರಖ್ಯಾತ ಡ್ರಮ್ ವಾದಕ ಶಿವಮಣಿ ಮತ್ತು ತಂಡದವರರಿಂದ ವಾದ್ಯಮೇಳ ಕಿಕ್ಕಿರಿದ ಜನಸಾಗರದ ಮುಂದೆ ಪ್ರಸ್ತುತಿಗೊಂಡಿತು. ಬಳಿಕ ಮಧೂರಿನ ನಾಟ್ಯಮಂಟಪ ಸ್ಕೂಲ್ ಆಫ್ ಫೈನ್ ಆಟ್ಸ್‍ನ ಸೌಮ್ಯಶ್ರೀಕಾಂತ್ ಮಧೂರು ತಂಡದವರಿಂದ ನಾಟ್ಯಾರ್ಚನೆ ನಡೆಯಿತು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries