ಮಧೂರು : ಧರ್ಮ, ಸಂಸ್ಕøತಿಯನ್ನು ಉಳಿಸಿ ಪೋಷಿಸಲು ಸಂಘಟಿತ ಹೋರಾಟ ಅನಿವಾರ್ಯ ಎಂಬುದಾಗಿ ಯುವ ವಾಗ್ಮಿ ಹಾರಿಕಾ ಮಂಜುನಾಥ್ ಬೆಂಗಳೂರು ತಿಳಿಸಿದ್ದಾರೆ. ಅವರು ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆಯ ಅಂಗವಾಗಿ ಶನಿವಾರ ನಡೆದ ಧಾರ್ಮಿಕ ಸಭೆಯಲ್ಲಿ ಪ್ರಧಾನ ಭಾಷಣ ಮಾಡಿದರು.
ಸನಾತನ ಧರ್ಮಕ್ಕೆ ಎಂದಿಗೂ ಅಳಿವಿಲ್ಲ. ಟಿಪ್ಪುಸುಲ್ತಾನ್ ದಾಳಿಯಿಂದ ಮಧೂರು ದೇಗುಲವೂ ಹೊರತಾಗಿಲ್ಲ. ಆದರೆ ದೇಗುಲಗಳನ್ನು ದೇವರೇ ಕಾಯ್ದುಕೊಂಡು ಬಂದಿದ್ದಾರೆ. ಜಗತ್ತಿನಲ್ಲಿ ಧರ್ಮ-ಸಂಸ್ಕøತಿ ಉಳಿಯಬೇಕಾದರೆ ಹಿಂದೂ ಧರ್ಮ ಬೆಳಗಬೇಕು. ಶ್ರೀಕೃಷ್ಣನ ಸಂದೇಶ ಧರ್ಮ, ಸಂಸ್ಕøತಿಯ ಪೋಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು.
ಕಾಸರಗೋಡು ಕೂಡ್ಲಿನ ಶ್ರೀಮಾತಾ ಅಮೃತಾನಂದಮಯೀ ಮಠದ ಶ್ರೀ ವೇದವಿದ್ಯಾಮೃತ ಚೈತನ್ಯ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಆಶಿರ್ವಚನ ನೀಡಿ, ನಮ್ಮ ಜೀವನ ಶ್ರೀದೇವರ ಅನುಗ್ರಹದೊಂದಿಗೆ ಐಶ್ವರ್ಯಪೂರ್ಣವಾಗಿ ಮುನ್ನಡೆಯಬೇಕಾದರೆ ಆಧ್ಯಾತ್ಮಿಕ ಚಿಂತನೆಯನ್ನು ಜೀವನದಲ್ಲಿ ಅಳವಡಿಸಕೊಳ್ಳುವುದು ಅನಿವಾರ್ಯ ಎಂದು ತಿಳಿಸಿದರು. ಮಾಣಿಲಶ್ರೀಧಾಮದ ಶ್ರೀ ಮೋಹನದಸ ಸ್ವಾಮೀಜಿ ಆಶೀರ್ವಚನ ನೀಡಿದರು.
ಬೆಂಗಳೂರು ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ರಾಜೇಶ್ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಧರ್ಮ ಅರಿತು ಮುನ್ನಡೆದಲ್ಲಿ ಸಾಮಾಜಿಕ ಸ್ವಾಸ್ಥ್ಯ ಹೆಚ್ಚಲು ಸಾಧ್ಯ. ಹೆಚ್ಚಿನ ಧರ್ಮಕಾರ್ಯಗಳು ನಡೆದುಬಂದಾಗ ಧಾರ್ಮಿಕ ಪ್ರಜ್ಞೆಜಾಗೃತಿಗೊಳ್ಳಲು ಸಾಧ್ಯ ಎಂದು ತಿಳಿಸಿದರು. ಹಿರಿಯ ಪತ್ರಕರ್ತರಾದ ಪಿ.ಎಸ್ ಪ್ರಕಾಶ್ ಮುಖ್ಯ ಅತಿಥಿಯಾಗಿದ್ದರು. ಪತ್ರಿಕಾ ಸಂಪಾದಕ ರವಿಶಂಕರ ಕೆ. ಭಟ್, ಡಾ. ಶಿವಪ್ರಸಾದ್ ಬಾಯಾರು, ತಿಂಬರ ಸಂಜೀವ ಶೆಟ್ಟಿ, ಮಧೂರು ಗ್ರಾಪಂ ಮಾಜಿ ಅಧ್ಯಕ್ಷ ಮಾಧವ ಮಾಸ್ಟರ್, ಮುಂಬೈಯಲ್ಲಿ ಉದ್ಯಮಿಯಾಗಿರುವ ಶಿವಶಂಕರ್ ನೆಕ್ರಾಜೆ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಅಶೋಕ್ ರೈ ಕೂಡ್ಲು, ಐತ್ತಪ್ಪ ಮವ್ವಾರು ಉಪಸ್ಥಿತರಿದ್ದರು. ಆರೋಗ್ಯ ಸಮಿತಿ ಅಧ್ಯಕ್ಷ ಡಾ.ಕೆ.ಕೆ ಶ್ಯಾನುಭಾಗ್ ಸ್ವಾಗತಿಸಿದರು.ನಿವೃತ್ತ ಮುಖ್ಯ ಶಿಕ್ಷಕ ರಾಜೇಂದ್ರ ಬಜಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ನಾಯ್ಕ್ ಕೊಲ್ಯ ವಂದಿಸಿದರು.

