ಕಣ್ಣೂರು: ಕೇರಳದ ಪ್ರಮುಖ ಶಕ್ತಿ ಕೇಂದ್ರಗಳಲ್ಲಿ ಒಂದಾದ ಕಣ್ಣೂರು ಜಿಲ್ಲೆಯ ಪಯಂಗಾಡಿ ಸನಿಹದ ಮಾಡಾಯಿಕ್ಕಾವು ಶ್ರೀ ಭಗವತೀ ದೇವಸ್ಥಾನಕ್ಕೆ ನಟ ದರ್ಶನ್ ಕುಟುಂಬ ಭೇಟಿ ನಿಡಿ ಶ್ರೀದೇವರ ದರ್ಶನ ಪಡೆದಿದ್ದಾರೆ. ಮಾಡಾಯಿಕ್ಕಾವು ಶ್ರೀ ಭಗವತೀ ದೇವಸ್ಥಾನ ಶತ್ರು ಸಂಹಾರ ಪೂಜೆಗೆ ಖ್ಯಾತಿ ಪಡೆದಿದೆ. ಪತ್ನಿ, ಪುತ್ರನ ಜತೆಗೆ ಆಗಮಿಸಿದ ದರ್ಶನ್ ಶತ್ರುಸಂಹಾರ ಪೂಜೆ ನಡೆಸಿದರು.
ಸ್ನೇಹಿತನ ಜತೆ ಆಗಮಿಸಿದ ದರ್ಶನ್ ತಾಸುಗಳ ಕಾಲ ದೇವಸ್ಥಾನದಲ್ಲಿ ಕಳೆದಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಜೈಲಿನಿಂದ ಬಿಡುಗಡೆಗೊಂಡ ನಂತರ ಟೆಂಪಲ್‍ರನ್ ಭಾಗವಾಗಿ ಮಾಡಯಿಕ್ಕಾವಿಗೆ ಆಗಮಿಸಿ ಶತ್ರುಸಂಹಾರ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಭದ್ರಕಾಳಿಸ್ವರೂಪಿಣಿಯಾಗಿ ನೆಲೆನಿಂತಿರುವ ಈ ಭಗವತೀ ಕ್ಷೇತ್ರದಲ್ಲಿ ಮಾಂಸಾಹಾರವೇ ಪ್ರಸಾದವಾಗಿ ನೀಡಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಕರ್ನಾಟಕದ ಪ್ರಮುಖ ರಾಜಕೀಯ ಮುಖಂಡರು ಇಲ್ಲಿಗೆ ಭೀಟಿ ನೀಡುತ್ತಿದ್ದಾರೆ.




