ಕಾಸರಗೋಡು: ಶಾಲಾ ಮಕ್ಕಳಿಗೆ ಕುತೂಹಲ ಮೂಡಿಸುವ ನಿಟ್ಟಿನಲ್ಲಿ ಬಾನಂ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಪ್ರಯೋಗ ಆಯೋಜಿಸಲಾಯಿತು. ಸರಳ ಪ್ರಯೋಗಗಳ ಮೂಲಕ ವಿಜ್ಞಾನದ ಅದ್ಭುತವನ್ನು ಪ್ರಸ್ತುತಪಡಿಸುವ ಮೂಲಕ ವಿದ್ಯಾರ್ಥಿಗಳಿಗೆ ವಿಜ್ಞನವನ್ನು ಸುಲಭವಾಗಿ ಬೋಧಿಸಲಾಯಿತು. ವಿಜ್ಞಾನ ಶಿಕ್ಷಕ ಕೆ.ಚಂದ್ರನ್ ಚಿಮೇನಿ ಅವರು ನಿತ್ಯ ಜೀವನದಲ್ಲಿ ಕಾಣುವ ಹಲವು ವಿಷಯಗಳಿಗೆ ವೈಜ್ಞಾನಿಕ ಸ್ವರೂಪ ನೀಡಿ ಸಣ್ಣಪುಟ್ಟ ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪಿ.ಮನೋಜ್ ಕುಮಾರ್, ಮುಖ್ಯಶಿಕ್ಷಕಿ ಸಿ.ಕೋಮಲವಳ್ಳಿ, ಪಿ.ಕೆ.ಬಾಲಚಂದ್ರನ್, ಅನಿತಾ ಮೇಳತ್ ಉಪಸ್ಥಿತರಿದ್ದರು.





