ಬದಿಯಡ್ಕ: ದೇವರ ಮುಂದೆ ಪ್ರಾರ್ಥನೆ ಸಲ್ಲಿಸುವಾಗ ಬೇಡಿಕೆಗಳ ಪಟ್ಟಿಯನ್ನು ನಮ್ಮಲ್ಲಿಟ್ಟು ಸಂಪತ್ತಿನ ಪೆಟ್ಟಿಗೆಯನ್ನು ಭಗವಂತನಿಗೆ ಸಮರ್ಪಿಸಿದಾಗ ಮಾನವತ್ವದ ಆಚೆಗೆ ಮಾಧವತ್ವ ಪ್ರಾಪ್ತಿಯಾಗುತ್ತದೆ. ಸಂಸಾರಕ್ಕೆ ‘ಕ’ಕಾರದ ಒತ್ತು ನೀಡಿದಾಗ ಸಂಸ್ಕಾರ, ಸಮೃದ್ಧಿ ನೆಲೆಗೊಳ್ಳುತ್ತದೆ. ಇದು ಇಂದಿನ ಯುವ ಸಮೂಹಕ್ಕೆ ಅಗತ್ಯವಾದ ಪ್ರಸಾದ ಎಂದು ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ ಅನುಗ್ರಹ ನುಡಿಗಳನ್ನಾಡಿದರು.
ನೀರ್ಚಾಲು ಮಾನ್ಯ ಸಮೀಪದ ಕಾರ್ಮಾರು ಶ್ರೀಮಹಾವಿಷ್ಣು ದೇವಾಲಯದಲ್ಲಿ ನಡೆಯುತ್ತಿರುವ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಗುರುವಾರ ನಡೆದ ಧಾರ್ಮಿಕ ಸಭೆಯಲ್ಲಿ ದಿವ್ಯ ಉಪಸ್ಥಿತರಿದ್ದು ಅವರು ಆಶೀರ್ವಚನ ನೀಡಿದರು.
ಕಾಲಾಕಾಲಕ್ಕೆ ಬದಲಾಗುತ್ತಾ ಸಾಗುವ ಧರ್ಮದ ಅನುಶಾಸನವನ್ನು ಪ್ರತಿಯೊಬ್ಬರೂ ಶ್ರದ್ಧೆಯಿಂದ ಪಾಲಿಸಬೇಕು. ಸಾಧನಾ ಪಥದ ಆಧ್ಯಾತ್ಮಿಕತೆ ಗಟ್ಟಿಯಾದಾಗ ಸಂತೃಪ್ತ ಸಮಾಜ ನಿರ್ಮಾಣ ಸಾಧ್ಯ,. ಈ ನಿಟ್ಟಿನಲ್ಲಿ ಪುರ್ನಪ್ರತಿಷ್ಠಾ ಚಟುವಟಿಕೆಗಳು ಒಗ್ಗೂಡುವಿಕೆಗೆ ವೇದಿಕೆಯಾಗಿ ಪರಸ್ಪರ ಸಹಕಾರದೊಂದಿಗೆ ಬೆಳವಣಿಗೆಗೆ ಕಾರಣವಾಗುತ್ತದೆ ಎಂದವರು ತಿಳಿಸಿದರು.
ಖ್ಯಾತ ವಾಸು ಶಿಲ್ಪಿ ಕೃಷ್ಣಪ್ರಸಾದ ಮುನಿಯಂಗಳ ಅಧ್ಯಕ್ಷತೆ ವಹಿಸಿದ್ದ ಸಭಡೆಯಲ್ಲಿ ದಿವ್ಯ ಉಪಸ್ಥಿತರಿದ್ದ ಚಿನ್ಮಯ ಮಿಷನ್ ಕೇರಳ ಮುಖ್ಯಸ್ಥರಾದ ಶ್ರೀವಿವಿಕ್ತಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ದೇವಾಲಯಗಳಲ್ಲಿ ಪ್ರಹಹಿಸುವ ಶಕ್ತಿ ಚೈತನ್ಯ ನಮ್ಮೊಳಗೂ ಆವಾಹಿಸಿಕೊಳ್ಳಲು ದೇವಾಲಯಗಳ ನಿರಂತರ ಭೇಟಿ ಅತ್ಯಗತ್ಯ. ಶರೀರ ಮತ್ತು ಮನಃಶುದ್ಧಿಯೊಂದಿಗೆ ನಾವು ನೀಡುವ ಆಋಆಧನಾಲಯಗಳ ಭೇಟಿ ನಮ್ಮಲ್ಲಿಯ ಧನಾತ್ಮಕತೆಯ ವೃದ್ಧಿಗೆ, ಸಮೃದ್ಧಿಗೆ ಕಾರಣವಾಗುತ್ತದೆ. ಸಕ್ರಿಯ, ಸಜ್ಜೀಕೃತ ಮನಸ್ಸಿನಲ್ಲಿ ಭಗವಂತ ನೆಲೆಯಾಗುತ್ತಾನೆ.ತನ್ಮೂಲಕ ಅನುಗ್ರಹಪೂರ್ಣ ಬದುಕು, ಸಂತೃಪ್ತತೆ ನೆಲೆಯಾಗುತ್ತದೆ ಎಂದವರು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದಕ್ಷಿಣ ಕನ್ನಡ ನಿರ್ದೇಶಕ ಪ್ರವೀಣ್ ಕುಮಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಉದ್ಯಮಿ ಎಂ.ಡಿ.ವೆಂಕಟೇಶ್, ನಿವೃತ್ತ ಪೋಲೀಸ್ ಅಧಿಕಾರಿ ರಾಧಾಕೃಷ್ಣ ಮಣಿಯಾಣಿ ಮಾನ್ಯ ಉಪಸ್ಥಿತರಿದ್ದು ಮಾತನಾಡಿದರು.
ಈ ಸಂದರ್ಭ ಕಾರ್ಮಾರು ಶ್ರೀಕ್ಷೇತ್ರದ ಪುನಃನಿರ್ಮಾಣದಲ್ಲಿ ಸಹಕರಿಸಿದ್ದ ಕೃಷ್ಣಪ್ರಸಾದ್ ಮಿನಿಯಂಗಳ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.ವಿಷ್ಣು ಶರ್ಮ ಪಟ್ಟಾಜೆ ಸ್ವಾಗತಿಸಿ, ಪಿ.ಜಿ.ಶ್ರೀಕೃಷ್ಣ ಭಟ್ ಪುದುಕೋಳಿ ವಂದಿಸಿದರು. ಮಹೇಶ್ ವಳಕ್ಕುಂಜ ಅಭಿನಂದನಾ ಪತ್ರ ವಾಚಿಸಿದರು. ಮೋಹನ ಎಂ.ಮಾನ್ಯ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿದುಷಿಃ ಲತಾ ಶಿಧರ್ ಕಾಸರಗೋಡು ಅವರ ಶಿಷ್ಯಂದಿರಿಂದ ಭರತನಾಟ್ಯ ಪ್ರದರ್ಶ, ರಂಗಸಿರಿ ಸಾಂಸ್ಕøತಿಕ ವೇದಿಕೆ ಬದಿಯಡ್ಕ ತಂಡದವರಿಂದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.





