ಮಂಜೇಶ್ವರ: ಬ್ರಹ್ಮಕಲಶದ ಸೊಬಗು ನೋಡುವಾಗ ಎಲ್ಲರೂ ತನ್ನ ಮನಸ್ಸಿನ ಭಾವನೆ, ಯೋಚನೆ ಹೊರಗಿಟ್ಟು, ತನ್ನ ಎಲ್ಲಾ ಸಮಯ ಶಕ್ತಿ ಪರಿಶ್ರಮಗಳನ್ನು ಭಗವಂತನಿಗೆ ಅರ್ಪಣೆ ಮಾಡಿದ್ದಾರೆ ಎಂದು ಶ್ರೀ ವಿಜಯಾನಂದ ಸ್ವಾಮೀಜಿ, ಬೈಲಹೊಂಗಲ ಆಶೀವರ್ಚನ ನೀಡಿದರು.
ಅವರು ಕೀರ್ತೆಶ್ವರ ಶ್ರೀ ಸದಾಶಿವ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆರನೇ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಶರವು ಶ್ರೀಕ್ಷೇತ್ರದ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ ಶಿಲೆಶಿಲೆ ದೀಪ ಬೆಳಗಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಮೋಹನ್ ಶೆಟ್ಟಿ ತೂಮಿನಾಡು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶ್ರೀಕ್ಷೇತ್ರದ ಪ್ರಧಾನ ಅರ್ಚಕ ರವೀಶ್ ಭಟ್, ಚಲಚಿತ್ರ ನಿರ್ಮಾಪಕ ಲಾಂಚು ಲಾಲ್ ತೊಕ್ಕೊಟ್ಟು, ಧಾರ್ಮಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು, ಧಾರ್ಮಿಕ ಮುಂದಾಳು ವಕೀಲ ನವೀನ್ ರಾಜ್, ಹೊಸಂಗಡಿ ಅಯ್ಯಪ್ಪ ಕ್ಷೇತ್ರದ ಅಧ್ಯಕ್ಷ ಪದ್ಮನಾಭ ಕಡಪ್ಪರ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ನಟ್ಟಿಬೈಲು, ಧಾರ್ಮಿಕ ಮುಂದಾಳು ಯಾದವ ಕೀರ್ತೆಶ್ವರ, ಸಾಮಾಜಿಕ ಕಾರ್ಯಕರ್ತ ನವೀನ್ ಮೊಂತೆರೋ ಮಂಜೇಶ್ವರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಶುಭ ಹಾರೈಸಿದರು. ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಈಶ್ವರ ಮಲ್ಪೆ, ಲಂಚು ಲಾಲ್ ತೊಕ್ಕೊಟ್ಟು, ಚಿತ್ರ ನಟ ಪೃಥ್ವಿ ಅಂಬಾರ್, ನವೀನ್ ಮೊಂತೆರೋ ಮಂಜೇಶ್ವರ, ಪ್ರಕಾಶ್ ತೂಮಿನಾಡು, ಬಾಲಕೃಷ್ಣ ಮಾಸ್ತರ್ ಮಂಜೇಶ್ವರ, ಪ್ರಿಯಾಂಕ ಲತೀಶ್ ತೊಕ್ಕೊಟ್ಟು ಅವರನ್ನು ಕೂಲ್ ಗೈಸ್ ವತಿಯಿಂದ ಸನ್ಮಾನಿಸಲಾಯಿತು. ತೃಪ್ತಿ, ವರ್ಷ ಪ್ರಾರ್ಥನೆ ಹಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಉದಯ ಕುಮಾರ್ ಆನೆಬಾಗಿಲು ಸ್ವಾಗತಿಸಿ, ವಿಜೆ ಮಧುರಾಜ್ ಗುರುಪುರ ನಿರೂಪಿಸಿದರು. ಧಾರ್ಮಿಕ ಮುಂದಾಳು ಹರೀಶ್ ಶೆಟ್ಟಿ ಮಾಡ ವಂದಿಸಿದರು.
ಬಳಿಕ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಕೂಲ್ ಗೈಸ್ ಕೀರ್ತೇಶ್ವರ ಪ್ರಾಯೋಜಕತ್ವದಲ್ಲಿ ಚೈತನ್ಯ ಕಲಾವಿದರು, ಬೈಲೂರು ಇವರಿಂದ 'ಅಷ್ಟಮಿ' ಎಂಬ ತುಳು ಸಾಂಸಾರಿಕ ನಾಟಕ ಪ್ರದರ್ಶನಗೊಂಡಿತು. ವೈದಿಕ ಕಾರ್ಯಕ್ರಮದಂಗವಾಗಿ ಬೆಳಿಗ್ಗೆ ಅಂಕುರ ಪೂಜೆ, ಗಣಪತಿ ಹೋಮ, 7.56 ರ ಮೀನ ಲಗ್ನದಲ್ಲಿ ಮಹಾಗಣಪತಿ, ಶಾಸ್ತಾ ದೇವರಿಗೆ ಬ್ರಹ್ಮಕಲಶಾಭಿಷೇಕ, 11.10 ಕ್ಕೆ ವೃಷಭ ಲಗ್ನದಲ್ಲಿ ಶ್ರೀ ದುರ್ಗಾ ದೇವಿಯ ಬ್ರಹ್ಮಕಲಶಾಭಿμÉೀಕ, ಶ್ರೀ ಶಿವ ಸಹಸ್ರನಾಮಾವಳಿ ಯಾಗ, ರಕೇಶ್ವರಿ ದೈವಗಳ ಕಲಶಾಭಿμÉೀಕ, ಮಹಾಪೂಜೆ ಅನ್ನಸಂತರ್ಪಣೆ, ಕೂಲ್ ಗೈಸ್ ಕೀರ್ತೆಶ್ವರ ಪ್ರಾಯೋಜಕತ್ವದಲ್ಲಿ ಶ್ರೀ ಗುರುಕೃಪ ಭಜನಾ ಮಂಡಳಿ, ಉಳಿಯತಡ್ಕ, ಮಧೂರು, ಕಾಸರಗೋಡು ಇವರಿಂದ ಭಜನಾ ಸಂಕೀರ್ತನೆ, ಸಂಜೆ ಬ್ರಹ್ಮ ಕಲಶಾಧಿವಾಸ, ಅಧಿವಾಸ ಹೋಮ, ದುರ್ಗಾಪೂಜೆ, ಕುಂಭೇಶ ಕರ್ಕರಿ ಪೂಜೆ, ರಾತ್ರಿ ಪೂಜೆ, ಅನ್ನಸಂತರ್ಪಣೆ ನಡೆಯಿತು.




.jpg)
.jpg)
