ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಹದಿನಾರರ ಹರೆಯದ ಬಾಲಕಿಯನ್ನು ವಿವಾಹವಾಗಲು ಯತ್ನಿಸಿದ ಬಂಟ್ವಾಳ ಪೊಲೀಸ್ ಠಾಣೆ ವ್ಯಾಪ್ತಿಯ ವಿಕ್ರಮ(22)ಎಂಬಾತನನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಪೋಕ್ಸೋ ಅನ್ವಯ ಕೇಸು ದಾಖಲಿಸಲಾಗಿದೆ. ಬಾಲಕಿ ಹೆತ್ತವರು ನೀಡಿದ ದೂರಿನನ್ವಯ ಈತನನ್ನು ಬಂಧಿಸಲಾಗಿದೆ.
ವಿಕ್ರಮ ಬಾಲಕಿಯನ್ನು ಪ್ರೀತಿಸುತ್ತಿದ್ದನೆನ್ನಲಾಗಿದ್ದು, ಎರಡು ದಿವಸಗಳ ಹಿಂದೆ ಬಾಲಕಿ ಮನೆಗೆ ಆಗಮಿಸಿದ ವಿಕ್ರಮ ಬಾಲಕಿಯನ್ನು ಮದುವೆ ಮಾಡಿಕೊಡುವಂತೆ ಹೆತ್ತವರನ್ನು ಆಗ್ರಹಿಸಿದ್ದಾನೆ. ಬಾಲಕಿಗೆ ಪ್ರಾಯಪೂರ್ತಿಯಗದ ಹಿನ್ನೆಲೆಯಲ್ಲಿ ವಿವಾಹ ಸಾಧ್ಯವಿಲ್ಲವೆಂದು ಹೆತ್ತವರು ತಿಳಿಸಿದ್ದರು. ಇದರಿಂದ ಕುಪಿತನಾದ ವಿಕ್ರಮ ಹೆತ್ತವರಿಗೆ ಬೆದರಿಕೆಯೊಡ್ಡಿದ್ದಾನೆ. ಈ ನಿಟ್ಟಿನಲ್ಲಿ ಬಾಲಕಿ ಹೆತ್ತವರು ಪೊಲಿಸರಿಗೆ ದೂರು ನೀಡಿದ್ದರು.




