ಕುಂಬಳೆ: ಬೆನ್ನತ್ತಿ ಬರುತ್ತಿದ್ದ ನಾಯಿಯಿಂದ ರಕ್ಷಣೆಗಾಗಿ ವಿದ್ಯುತ್ ಕಂಬವೇರಿ ಸಿಲುಕಿಕೊಂಡ ಬೆಕ್ಕನ್ನು ಮೀನು ಕಾರ್ಮಿಕ, ಆರಿಫ್ ಕಡವತ್ ಎಂಬವರು ರಕ್ಷಿಸಿದ್ದು, ಈ ವಿಡಿಯೋ ವೈರಲ್ ಆಗುತ್ತಿದೆ.
ಶುಕ್ರವಾರ ಕುಂಬಳೆಯ ಮೀನುಮಾರುಕಟ್ಟೆ ಸನಿಹ ನಾಯಿಯೊಂದು ಬೆಕ್ಕನ್ನು ಅಟ್ಟಿಸಿಕೊಂಡು ಬಂದಿದ್ದು, ಬೇರೆ ದಾರಿ ಕಾಣದೆ ಬೆಕ್ಕು ಏಕಾಏಕಿ ವಿದ್ಯುತ್ ಕಂಬ ಏರಿ ಅಲ್ಲಿಂದ ಕೆಳಗಿಳಿಯಲಾಗದೆ ಸಿಲುಕಿಕೊಂಡಿತ್ತು. ತಕ್ಷಣ ಅರಿಫ್ ಅವರು ಫ್ಯೂಸ್ ತೆಗೆದು ವಿದ್ಯುತ್ ವಿಚ್ಛೇದಿಸಿ ಕಂಬವೇರಿ ವಯರುಗಳ ಮಧ್ಯೆ ಸಿಲುಕಿಕೊಂಡ ಬೆಕ್ಕನ್ನು ಕೆಳಗಿಳಿಸಿ ರಕ್ಷಿಸಿದ್ದಾರೆ. ಆರಿಫ್ ಸ್ವತ: ಇಲೆಕ್ಟ್ರಿಶಿಯನ್ ಆಗಿದ್ದು, ಬೆಕ್ಕು ಕಾರ್ಯಾಚರಣೆಗೆ ಸಹಕಾರಿಯಾಗಿತ್ತು.




