ಕಾಸರಗೋಡು : ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯ ಕಾಸರಗೋಡುಪೆರಿಯ ಕ್ಯಾಂಪಸ್‍ನಲ್ಲಿ ಹಿಂದಿ ಸಾಹಿತ್ಯದ ಮೇಲೆ ಪರಿಸರದ ಪ್ರಭಾವದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಯಿತು.
ಹಿಂದಿ ಸಂವಾದಂ ಹಿಂದಿ ವಿಭಾಗದ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಡೀನ್ ಅಕಾಡೆಮಿಕ್ ಪೆÇ್ರ. ಅಮೃತ್ ಜಿ. ಕುಮಾರ್ ಉದ್ಘಾಟಿಸಿದರು. ಹಿಂದಿ ವಿಭಾಗದ ಅಧ್ಯಕ್ಷ ಪೆÇ್ರ. ಮನು ಅಧ್ಯಕ್ಷತೆ ವಹಿಸಿದ್ದರು. ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಹಿಂದಿ ವಿಭಾಗದ ಮಾಜಿ ಅಧ್ಯಕ್ಷ ಪೆÇ್ರ. ಕೆ. ವನಜಾ ಪ್ರಧಾನ ಭಾಷಣ ಮಾಡಿದರು. ಡಾ. ಟಿ.ಕೆ ಅನೀಶ್ ಕುಮಾರ್, ಪೆÇ್ರ. ತಾರು ಎಸ್.ಪವಾರ್, ಡಾ. ಪಿ.ಸುಪ್ರಿಯಾ ಉಪಸ್ಥಿತರಿದ್ದರು. ಸ್ಕೂಲ್ ಆಫ್ ಲ್ಯಾಂಗ್ವೇಜಸ್ ಮತ್ತು ತುಲನಾತ್ಮಕ ಸಾಹಿತ್ಯದ ಡೀನ್ ಪೆÇ್ರ. ಜೋಸೆಫ್ ಕೋಯಿಪಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.





